ದ್ವಿತೀಯ ಭಾಷೆಯಾಗಿ ತಮಿಳು : ಸಮ್ಮೇಳನ ನಿರ್ಣಯಕ್ಕೆಚಂಪಾ ಟೀಕೆ
ದ್ವಿತೀಯ ಭಾಷೆಯಾಗಿ ತಮಿಳು : ಸಮ್ಮೇಳನ ನಿರ್ಣಯಕ್ಕೆಚಂಪಾ ಟೀಕೆ
ಕರ್ನಾಟಕದಲ್ಲಿರುವ ತಮಿಳರೆಲ್ಲರೂ ಕಡ್ಡಾಯವಾಗಿ ಕನ್ನಡ ಕಲಿಯಲು ಆಗ್ರಹ
ಕನ್ನಡ : ನೆಲ ಮತ್ತು ಸಂಸ್ಕೃತಿ ಎನ್ನುವ ವಿಷಯದ ಕುರಿತು ಬೀದರ್‌ನ ಬಿವಿಬಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಜುಲೈ 26ರಂದು ಉಪನ್ಯಾಸ ನೀಡಿದ ಚಂಪಾ- ತಮಿಳನ್ನು ದ್ವಿತೀಯ ಭಾಷೆಯಾಗಿ ಅಂಗೀಕರಿಸಬೇಕು ಎನ್ನುವ ವಿಷಯವೇ ಒಂದು ಅಸಂಗತ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ಈ ಉಪನ್ಯಾಸ ಏರ್ಪಡಿಸಿತ್ತು .
ಕರ್ನಾಟಕದಲ್ಲಿರುವ ತಮಿಳರೆಲ್ಲರೂ ಮೊದಲು ಕಡ್ಡಾಯವಾಗಿ ಕನ್ನಡ ಕಲಿಯಬೇಕು ಎಂದು ಚಂಪಾ ಒತ್ತಾಯಿಸಿದರು. ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿಯೇ ನೀಡುವಂತೆ ಕನ್ನಡಪರ ಸಂಘಟನೆಗಳು ಒತ್ತಾಯಿಸಬೇಕು ಎಂದೂ ಚಂಪಾ ಹೇಳಿದರು.
ತಮಿಳನ್ನು ದ್ವಿತೀಯ ಭಾಷೆಯಾಗಿ ಅಂಗೀಕರಿಸುವಂತೆ ಒತ್ತಾಯಿಸುವ ಹಾಗೂ ಬೆಂಗಳೂರಿನಲ್ಲಿ ತಿರುವಳ್ಳವರ್ ಪ್ರತಿಮೆ ಸ್ಥಾಪನೆಗೆ ಒತ್ತಾಯಿಸುವ ನಿರ್ಣಯಗಳನ್ನು, ಕಳೆದ ಭಾನುವಾರ (ಜುಲೈ 25) ಬೆಂಗಳೂರಿನಲ್ಲಿ ನಡೆದ ವಿಶ್ವ ತಮಿಳು ಸಮ್ಮೇಳನ ಕೈಗೊಂಡಿತ್ತು .
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications