ರಾಜ್ಯಸಭೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯದ ಕೆ. ರೆಹಮಾನ್‌ ಖಾನ್‌ ಆಯ್ಕೆ

ರಾಜ್ಯಸಭೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯದ ಕೆ. ರೆಹಮಾನ್‌ ಖಾನ್‌ ಆಯ್ಕೆ
ಪ್ರತಿಷ್ಠಿತ ಸದನದ ಉಪಾಧ್ಯಕ್ಷ ಸ್ಥಾನಕ್ಕೆ ಸಂದ ಎರಡನೇ ಕನ್ನಡಿಗ

ನವದೆಹಲಿ : ಕೇಂದ್ರ ರಾಸಾಯಿನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಕೆ.ರೆಹಮಾನ್‌ ಖಾನ್‌ ರಾಜ್ಯಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯಾಗಿ ಜು.22ರ ಗುರುವಾರ ಆಯ್ಕೆಯಾದರು.

ರಾಜ್ಯಸಭೆ ಉಪಾಧ್ಯಕ್ಷ ಸ್ಥಾನಕ್ಕೆ ರೆಹಮಾನ್‌ ಖಾನ್‌ರ ಆಯ್ಕೆಯಾಂದಿಗೆ ಕನ್ನಡಿಗರೊಬ್ಬರಿಗೆ ಈ ಪ್ರತಿಷ್ಠಿತ ಸ್ಥಾನ ಎರಡನೇ ಬಾರಿ ದೊರೆತಂತಾಗಿದೆ. ಈ ಮುನ್ನ ಮಾಜಿ ಸಂಸದೆ ಮಾರ್ಗರೆಟ್‌ ಆಳ್ವರ ಅತ್ತೆ ವಯಲೆಟ್‌ ಆಳ್ವ ರಾಜ್ಯಸಭೆ ಉಪಾಧ್ಯಕ್ಷರ ಸ್ಥಾನ ಅಲಂಕರಿಸಿದ್ದರು.

ರಾಜ್ಯಸಭೆ ಉಪಾಧ್ಯಕ್ಷ ಸ್ಥಾನಕ್ಕೆ 55 ವರ್ಷದ ರೆಹಮಾನ್‌ ಖಾನ್‌ ಹೆಸರನ್ನು ಸಂಸದೀಯ ವ್ಯವಹಾರಗಳ ಸಚಿವ ಗುಲಾಂ ನಬಿ ಆಜಾದ್‌ ಸೂಚಿಸಿದರು. ಇದಕ್ಕೂ ಮುನ್ನ ಉಪಾಧ್ಯಕ್ಷ ಸ್ಥಾನಕ್ಕೆ ಸಾಂಕೇತಿಕ ಅಭ್ಯರ್ಥಿಯಾಗಿದ್ದ ಶಿವಸೇನೆಯ ಏಕನಾಥ್‌ ಠಾಕೂರ್‌ ಸ್ಪರ್ಧೆಯಿಂದ ಹಿಂದೆಗೆದಿರುವುದಾಗಿ ಶಿವಸೇನೆ ನಾಯಕ ಸಂಜಯ್‌ ನಿರುಪಮ್‌ ಪ್ರಕಟಿಸಿದರು. ಇದರೊಂದಿಗೆ ರೆಹಮಾನ್‌ ಖಾನ್‌ರ ಅವಿರೋಧ ಆಯ್ಕೆ ಸಾಧ್ಯವಾಯಿತು.

ಪ್ರತಿಷ್ಠಿತ ರಾಜ್ಯಸಭೆ ಉಪಾಧ್ಯಕ್ಷ ಸ್ಥಾನ ತಮಗೆ ದೊರಕಿರುವ ಕುರಿತು ಅಪಾರ ಸಂತಸ ವ್ಯಕ್ತಪಡಿಸಿರುವ ರೆಹಮಾನ್‌ ಖಾನ್‌, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+