ಹಿಂದೂ ಆಗಿದ್ದಕ್ಕೆನಾಚುವೆ ; ಸಚಿವ ಬಾಲು ಮಾತಿಗೆ ಆರೆಸ್ಸೆಸ್‌ ತರಾಟೆ

ಹಿಂದೂ ಆಗಿದ್ದಕ್ಕೆನಾಚುವೆ ; ಸಚಿವ ಬಾಲು ಮಾತಿಗೆ ಆರೆಸ್ಸೆಸ್‌ ತರಾಟೆ
ಸ್ಪಷ್ಟನೆ ಕೇಳಲು ಪ್ರಧಾನಿ ಮನಮೋಹನ್‌ಗೆ ಒತ್ತಾಯ

ಬೆಂಗಳೂರು : ಹಿಂದೂವಾಗಿ ಹುಟ್ಟಿದ್ದಕ್ಕೆ ವಿಷಾದ ವ್ಯಕ್ತ ಪಡಿಸಿರುವ ಕೇಂದ್ರ ನೌಕಾಯಾನ ಸಚಿವ ಟಿ.ಆರ್‌.ಬಾಲು ಅವರ ನಡವಳಿಕೆ ಕುರಿತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಜವಾಬ್ದಾರಿಯುತ ಸಚಿವರಾಗಿ ಬಾಲು ಅವರ ಹೇಳಿಕೆ ಖಂಡನಾರ್ಹ ಹಾಗೂ ಪ್ರಶ್ನಾರ್ಹ. ಸಚಿವರ ಹೇಳಿಕೆ ಸಂಪುಟದ ನಿಲುವನ್ನು ವ್ಯಕ್ತಪಡಿಸುವ ಸಾಧ್ಯತೆ ಇರುವುದರಿಂದ ಬಾಲು ಅವರು ಹೇಳಿಕೆ ನೀಡುವ ಮುನ್ನ ಯೋಚಿಸಬೇಕಿತ್ತು ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌ಎಸ್‌ಎಸ್‌ ವಕ್ತಾರ ರಾಮ್‌ ಮಾಧವ್‌ ಹೇಳಿದರು.

ಕೇಂದ್ರ ಸಚಿವರು ಕೆಲವೊಂದು ಕಟ್ಟುಪಾಡುಗಳನ್ನು ಹೊಂದಿರುತ್ತಾರೆ. ಜಾತ್ಯತೀತತೆಯನ್ನು ಎತ್ತಿ ಹಿಡಿಯುವುದಾಗಿ ಕೇಂದ್ರ ಸಚಿವ ಪ್ರಮಾಣ ವಚನ ಸ್ವೀಕರಿಸಿರುತ್ತಾನೆ. ಹೀಗಿದ್ದೂ ಸಚಿವ ಬಾಲು ಎಲ್ಲ ಕಟ್ಟುಪಾಡುಗಳನ್ನೂ ಗಾಳಿಗೆ ತೂರಿದ್ದಾರೆ ಎಂದು ರಾಮ್‌ ಮಾಧವ್‌ ದೂರಿದರು.

ಸಚಿವ ಬಾಲು ಧರ್ಮವೊಂದನ್ನು ಹೀಗಳೆದಿದ್ದಾರೆ. ಅವರಿಗೆ ಪ್ರಧಾನಿ ಮನಮೋಹನ್‌ಸಿಂಗ್‌ ಸ್ಪಷ್ಟೀಕರಣ ಕೇಳಬೇಕು ಎಂದು ರಾಮ್‌ ಮಾಧವ್‌ ಒತ್ತಾಯಿಸಿದರು.

ಚೆನ್ನೈನಲ್ಲಿನ ಕ್ರಿಶ್ಚಿಯನ್‌ ಸಮಾರಂಭವೊಂದರಲ್ಲಿ ಹಿಂದೂವಾಗಿ ಹುಟ್ಟಿರುವುದಕ್ಕೆ ನಾಚಿಕೆಪಡುತ್ತೇನೆ ಎಂದು ಬಾಲು ಹೇಳಿರುವುದಾಗಿ ಈಮುನ್ನ ವರದಿಯಾಗಿತ್ತು .

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+