ಬಜೆಟ್‌ನಲ್ಲಿ ಬೆಂಗಳೂರು ನಗಣ್ಯ ! ಇದು ನ್ಯಾಯಾನಾ ಸಿದ್ರಾಮಣ್ಣ ?
ಬಜೆಟ್‌ನಲ್ಲಿ ಬೆಂಗಳೂರು ನಗಣ್ಯ ! ಇದು ನ್ಯಾಯಾನಾ ಸಿದ್ರಾಮಣ್ಣ ?
ಗ್ರಾಮಗಳ ಅಭಿವೃದ್ಧಿ ಸರಿ, ಹಾಗೆಂದು ನಗರಗಳಿಗೆ ಬೆನ್ನು ತಟ್ಟೋದು ಬೇಡವಾ....
ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ರೈಲು ಯೋಜನೆ, ವರ್ತುಲ ರಸ್ತೆ ಮುಂತಾದ ಮಹತ್ವದ ಯೋಜನೆಗಳ ಮಾತಿರಲಿ, ಇತರ ಯಾವುದೇ ಸಣ್ಣಪುಟ್ಟ ಯೋಜನೆಯನ್ನೂ ಬಜೆಟ್‌ನಲ್ಲಿ ಪ್ರಸ್ತಾಪಿಸುವ ಗೋಜಿಗೂ ಡೆಪ್ಯುಟಿ ಸಿಎಂ ಹಾಗೂ ವಿತ್ತ ಸಚಿವ ಸಿದ್ಧರಾಮಯ್ಯ ಹೋಗಿಲ್ಲ . ಬೆಂಗಳೂರಷ್ಟೇ ಅಲ್ಲ , ಗುಲ್ಬರ್ಗಾ ಹಾಗೂ ಮೈಸೂರುಗಳಲ್ಲಿ ವಾಯುನೆಲೆ ಸ್ಥಾಪಿಸುವ ಪ್ರಸ್ತಾವನೆ ಬಿಟ್ಟರೆ ರಾಜ್ಯದ ಇತರ ಯಾವುದೇ ನಗರವೂ ಬಜೆಟ್‌ನಲ್ಲಿ ಕಾಣಿಸಿಕೊಳ್ಳುವ ಯೋಗ ಹೊಂದಿಲ್ಲ .
ಸಿದ್ಧರಾಮಯ್ಯ ಬೆಂಗಳೂರಿಗೆ ಮೋಸ ಮಾಡಿದ್ದಾರೆ. ಶೇ.70ರಷ್ಟು ಮಾರಾಟ ತೆರಿಗೆ ಸಂದಾಯವಾಗುವ ಬೆಂಗಳೂರಿಗೆ ಬಜೆಟ್‌ನಲ್ಲಿ ಮನ್ನಣೆ ದೊರೆತೇ ಇಲ್ಲ . ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಬೇಕು ಎನ್ನುವುದರಲ್ಲಿ ಎರಡನೇ ಮಾತಿಲ್ಲ . ಹಾಗೆಂದು ಬೆಂಗಳೂರನ್ನು ನಿರ್ಲಕ್ಷಿಸಬೇಕೆ ? ಎನ್ನುವುದು ನಾಗರಿಕರ ಅಳಲು.
ಒಂದೆಡೆ ಮಾಹಿತಿ ತಂತ್ರಜ್ಞಾನ, ಇನ್ನೊಂದೆಡೆ ಜೈವಿಕ ತಂತ್ರಜ್ಞಾನದ ಗೋಪುರಗಳು ಬೆಂಗಳೂರಲ್ಲಿ ಎದ್ದುನಿಲ್ಲುತ್ತಿವೆ. ಈ ಕಾರಣದಿಂದಾಗಿ ಪಶ್ಚಿಮದ ಜಗತ್ತು ಬೆಂಗಳೂರಿನತ್ತ ನೋಡುತ್ತಿದೆ. ನಗರದ ಆರೋಗ್ಯ ಕ್ಷೇತ್ರ ಕೂಡ ಅಂತರರಾಷ್ಟ್ರೀಯ ಮನ್ನಣೆ ಪಡೆದಿದೆ. ಇದೆಲ್ಲಾ ಸಿದ್ಧರಾಮಯ್ಯನವರ ಕಣ್ಣಿಗೆ ಕಾಣದ್ದು ಹೇಗೆ ?
ಸಿದ್ಧರಾಮಯ್ಯ ಹಾಗೂ ಧರ್ಮಸಿಂಗ್‌ರಿಗೆ ಬೆಂಗಳೂರು ನಾಗರಿಕರ ಅಳಲು ಕೇಳುತ್ತಿಲ್ಲವೆ ?
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಬಜೆಟ್ 2004-05 : ರೈತರಿಗೆ ಶುಕ್ರದೆಸೆ, ‘ಗಣಕ ಮಿತ್ರ’ರಿಗೆ ಶನಿದೆಸೆ
‘ಕರ್ನಾಟಕ ಆನ್‌ಲೈನ್ ಲಾಟರಿ ಮುಕ್ತ ’ ! ರಾಜ ್ಯಬಜೆಟ್ ಘೋಷಣೆ
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications