Get Updates
Get notified of breaking news, exclusive insights, and must-see stories!

ಬಜೆಟ್‌ 2004-05 : ರೈತರಿಗೆ ಶುಕ್ರದೆಸೆ, ‘ಗಣಕ ಮಿತ್ರ’ರಿಗೆ ಶನಿದೆಸೆ

ಬಜೆಟ್‌ 2004-05 : ರೈತರಿಗೆ ಶುಕ್ರದೆಸೆ, ‘ಗಣಕ ಮಿತ್ರ’ರಿಗೆ ಶನಿದೆಸೆ
ಕಂಪ್ಯೂಟರ್‌ ದುಬಾರಿ, ಮನರಂಜನಾ ತೆರಿಗೆ ಕಡಿತ, ರೈತರಿಗೆ ಶೇ.6ರ ದರದಲ್ಲಿ ಬಡ್ಡಿ

ಬೆಂಗಳೂರು : ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ತೀವ್ರ ಒತ್ತು ನೀಡುವುದು ಎಂದು ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಸಂಪುಟದ ನಂ.2 ಸಿದ್ಧರಾಮಯ್ಯ, 2004-05ರ ರಾಜ್ಯ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.

ಉತ್ತರ ಕರ್ನಾಟಕದ ಪ್ರಗತಿಗೆ ಹಾಗೂ ಸಾಮಾಜಿಕ ಅಸಮತೋಲನಕ್ಕೆ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ 7170 ಕೋಟಿ ರುಪಾಯಿಗಳನ್ನು ಆಯವ್ಯಯದಲ್ಲಿ ಒದಗಿಸಲಾಗುವುದು ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಜುಲೈ 19ರ ಸೋಮವಾರ ಸಿದ್ಧರಾಮಯ್ಯ ಬಜೆಟ್‌ ಮಂಡಿಸಿದರು.

ರೈತಪರ ನೀತಿಯನ್ನು ಪುನರುಚ್ಛರಿಸಿರುವ ಸರ್ಕಾರ, 2004-05ರ ಸಾಲಿನಲ್ಲಿ 840 ಕೋಟಿ ರುಪಾಯಿಗಳನ್ನು ಕೃಷಿ ವಲಯಕ್ಕೆ ಮೀಸಲಿಟ್ಟಿದೆ. ಶೇ.6ರ ದರದಲ್ಲಿ ಕೃಷಿಕರಿಗೆ ಸಾಲ ನೀಡಲು 60 ಕೋಟಿ ರುಪಾಯಿಗಳ ನಿಧಿ ಸ್ಥಾಪಿಸಲಾಗುವುದು ಎಂದು ಸಿದ್ಧರಾಮಯ್ಯ ಬಜೆಟ್‌ ಭಾಷಣದಲ್ಲಿ ತಿಳಿಸಿದರು.

2004-05ರ ಸಾಲಿನಲ್ಲಿ ಒಟ್ಟು 32065.99 ಕೋಟಿ ರುಪಾಯಿ ಸಂಗ್ರಹವನ್ನು ನಿರೀಕ್ಷಿಸಲಾಗಿದೆ. ವೆಚ್ಚದ ಪ್ರಮಾಣ ಅಂದಾಜು 31591.88 ಕೋಟಿ. ಎಂಟು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಉಳಿಕೆ ಬಜೆಟ್‌ ಮಂಡಿಸಲಾಗಿದ್ದು , 72.83 ಕೋಟಿ ರುಪಾಯಿ ಉಳಿಕೆಯನ್ನು ಸಿದ್ಧರಾಮಯ್ಯ ತೋರಿಸಿದ್ದಾರೆ.

ಬಜೆಟ್‌ನ ಮುಖ್ಯಾಂಶಗಳು :

  • ಆರೋಗ್ಯ ಮತ್ತು ಪೌಷ್ಟಿಕಾಂಶ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಪದ್ಧತಿಯ ಮೇಲ್ದರ್ಜೆಗೆ 765 ಕೋಟಿ ರುಪಾಯಿ ಒದಗಿಸಲಾಗುವುದು. ಯಶಸ್ವಿನಿ ಯೋಜನೆಯನ್ನು ಮತ್ತಷ್ಟು ಬಲಗೊಳಿಸಲಾಗುವುದು.
  • ನೇಕಾರರಿಗಾಗಿ 20 ಕೋಟಿ ರುಪಾಯಿ ಪ್ಯಾಕೇಜ್‌.
  • ಸಣ್ಣ ಕೈಗಾರಿಕೆಗಳಿಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಹಣಕಾಸು ನಿಗಮದ ಅನುದಾನ 65 ಕೋಟಿ ರುಪಾಯಿಗೆ ಹೆಚ್ಚಳ.
  • ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳವರು ತಮ್ಮ ವೃತ್ತಿ ನೈಪುಣ್ಯ ಹೆಚ್ಚಿಸಿಕೊಳ್ಳಲು ಹಾಗೂ ಸ್ವಯಂ ಉದ್ಯೋಗ ಸ್ಥಾಪಿಸಲು 20 ಕೋಟಿ ರುಪಾಯಿ ಮೀಸಲು.
  • ಮೈಸೂರು ಹಾಗೂ ಗುಲ್ಬರ್ಗಾದಲ್ಲಿ ವಾಯುನೆಲೆಗಳ ಸ್ಥಾಪನೆಯ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿ . ಇದಕ್ಕಾಗಿ 5 ಕೋಟಿ ರುಪಾಯಿ ಮೀಸಲಿಡುವ ಉದ್ದೇಶ.
  • ಜೈವಿಕ ತಂತ್ರಜ್ಞಾನ ಹಾಗೂ ಆನ್ವಯಿಕ ಬಯೋಇನ್ಫಾರ್ಮಟಿಕ್ಸ್‌ ಸಂಸ್ಥೆಗಾಗಿ 10 ಕೋಟಿ ರುಪಾಯಿ. ಜೈವಿಕ ತಂತ್ರಜ್ಞಾನ ಯೋಜನೆಗಳಿಗೆ ಸರ್ವ ಬೆಂಬಲ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲೂ ರಾಜ್ಯ ಪ್ರಕಾಶಿಸುವಂತಾಗಲು ಕ್ರಮ.
  • ಉತ್ತರ ಕರ್ನಾಟಕದ ಧಾರವಾಡದಲ್ಲಿ ವಿಜ್ಞಾನ ನಗರಿಯ ಅಭಿವೃದ್ಧಿ .
  • ಗುಲ್ಬರ್ಗಾದ ಜೇವರ್ಗಿಯಲ್ಲಿ ಆಹಾರ ಪಾರ್ಕ್‌.
  • ರಕ್ಷಣಾ ಸೇವೆಗಳಿಗೆ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಪ್ರೋತ್ಸಾಹಿಸಲು ಕೊಡಗಿನಲ್ಲಿ ಸೈನಿಕ ಶಾಲೆ ಸ್ಥಾಪನೆ. ಇದಕ್ಕಾಗಿ 1 ಕೋಟಿ ರುಪಾಯಿ ಮೀಸಲು.
  • ಹೆಚ್ಚುವರಿ ಸಂಪನ್ಮೂಲಗಳ ಕ್ರೋಢೀಕರಣಕ್ಕಾಗಿ ಪ್ರಸ್ತುತ ಐಷಾರಾಮಿ ವಸ್ತುಗಳಿಗೆ ನೀಡಲಾಗಿರುವ ಶೇ.8ರ ರಿಯಾಯಿತಿ ಹಾಗೂ ರಕ್ಷಣಾ ಪಡೆಗಳ ಸ್ಟೋರ್‌ಗಳಲ್ಲಿನ ವಸ್ತುಗಳಿಗೆ ನೀಡುತ್ತಿರುವ ಶೇ.4ರ ರಿಯಾಯಿತಿ ರದ್ದು .
  • ಸರಿಯಾದ ಪ್ರಮಾಣದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗವನ್ನು ಹೊಂದುವುದು ಸರ್ಕಾರದ ಆದ್ಯತೆಗಳಲ್ಲೊಂದು. ಹೀಗಾಗಿ ಎಲ್ಲ ಇಲಾಖೆಗಳ ಪುನರ್ರಚನೆ ಹಾಗೂ ವಿಆರ್‌ಎಸ್‌ ಯೋಜನೆ ಮುಂದುವರಿಯಲಿದೆ.
  • ಹೊಸ ನೇಮಕಾತಿಗಳ ಸ್ಥಗಿತ ಮುಂದುವರಿಕೆ.
  • ಕಂಪ್ಯೂಟರ್‌ ಸಾಫ್ಟ್‌ವೇರ್‌ ಮೇಲಿನ ತೆರಿಗೆ ಶೇ.4ರಿಂದ 12ಕ್ಕೆ ಹೆಚ್ಚಳ.
  • ಡೀಸೆಲ್‌, ಪಡಿತರೇತರ ಸೀಮೆಎಣ್ಣೆ , ಸಿಮೆಂಟ್‌, ಗಾಂಜಾ, ಭಂಗಿ ಹಾಗೂ ಇನ್ನಿತರ ನಿಕೋಟಿನ್‌ ಯುಕ್ತ ವಸ್ತುಗಳು, ಅಡುಗೆಮನೆ ವಸ್ತುಗಳು, ವನಸ್ಪತಿ, ಸಿಗರೇಟ್‌ ಫಿಲ್ಟರ್‌ ಮತ್ತಿತರ ವಸ್ತುಗಳ ಮೇಲಿನ ತೆರಿಗೆ ಹೆಚ್ಚಳ.
  • ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಪಡಿತರಚೀಟಿದಾರರಿಗೆ ಕೇಜಿಗೆ 3 ರುಪಾಯಿಯಂತೆ ಮಾಸಿಕ 20 ಕೇಜಿ ಅಕ್ಕಿ ಹಾಗೂ 5 ಕೇಜಿ ಗೋಧಿ ನೀಡಲಾಗುವುದು.
  • ಶ್ರೀರಂಗಪಟ್ಟಣ, ಬಿಜಾಪುರ, ಗುಲ್ಬರ್ಗಾ, ಕಿತ್ತೂರುಗಳನ್ನು ಪರಂಪರೆ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು 3 ಕೋಟಿ ರುಪಾಯಿ.
  • ಬೆಳೆ ವಿಮೆಗೆ 241 ಕೋಟಿ ರು. ಹೆಚ್ಚುವರಿ ಅನುದಾನ.
  • ಕೃಷಿ ಉತ್ಪನ್ನಗಳ ಬೆಲೆ ಕುಸಿತ ತಡೆಗೆ ಆವರ್ತನ ನಿಧಿಗೆ 100 ಕೋಟಿ ರು.
  • ಮಣ್ಣಿನ ರಕ್ಷಣೆ ಹಾಗೂ ಜಲ ಸಂಪನ್ಮೂಲ ರಕ್ಷಣೆಗೆ 100 ಕೋಟಿ.
  • ಕೆರೆ ನಿರ್ವಹಣೆ ಯೋಜನೆಗೆ 670 ಕೋಟಿ ರು., ಗ್ರಾಮೀಣ ನೀರು ಪೂರೈಕೆ ಕಾಮಗಾರಿಗಳಿಗೆ 1035 ಕೋಟಿ ರು.
  • ಸಿನಿಮಾದ ಮನರಂಜನಾ ತೆರಿಗೆ ಶೇ.70ರಿಂದ 40ಕ್ಕೆ ಕಡಿತ.
  • ಶೇ.6ರ ಬಡ್ಡಿಯಲ್ಲಿ ಕೃಷಿಕರಿಗೆ ಸಾಲ ನೀಡಿಕೆ.
  • ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ 20 ಕೋಟಿ ಮೀಸಲು.
  • 2005ರ ಏಪ್ರಿಲ್‌ 1ರಿಂದ ವ್ಯಾಟ್‌ ಜಾರಿ.
(ಪಿಟಿಐ)

ವಾರ್ತಾ ಸಂಚಯ
‘ಕರ್ನಾಟಕ ಆನ್‌ಲೈನ್‌ ಲಾಟರಿ ಮುಕ್ತ ’ ! ರಾಜ ್ಯಬಜೆಟ್‌ ಘೋಷಣೆ

ಮುಖಪುಟ / ಧರ್ಮ-ಕಾರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+