ಕಾಣದ ಆಕೃತಿಯ ವಿಕೃತಿ : 15 ದಿನಗಳಿಂದ ಮಹಿಳೆಯರ ಅತ್ಯಾಚಾರ
ಕಾಣದ ಆಕೃತಿಯ ವಿಕೃತಿ : 15 ದಿನಗಳಿಂದ ಮಹಿಳೆಯರ ಅತ್ಯಾಚಾರ
ಅಹ್ಮದಾಬಾದ್‌ನಲ್ಲಿ ಹಗಲಿರುಳು ಭಯಭೀತಿಯ ವಾತಾವರಣ
ಅತ್ಯಾಚಾರ ನಡೆಸುತ್ತಿರುವುದು .... ಭೂತ !
ಆರಡಿ ಎತ್ತರ, ದೈತ್ಯದೇಹಿ, ಭುಜದವರೆಗೂ ಮೈಮೇಲೆಲ್ಲ ಕಪ್ಪು ಕೂದಲು, ಕೆಂಗಣ್ಣು, ಬಟ್ಟೆ ಹಾಕಿಕೊಂಡ ಸುಳಿವಿಲ್ಲ, ಕಾಲಿಗೆ ಕಪ್ಪನೆಯ ಶೂಸು... ಅವರವರ ಕಲ್ಪನೆಯಂತೆ ರೂಪತಳೆಯುತ್ತಿರುವ ಈ ಆಕೃತಿ ಮಹಿಳೆಯರ ಮಾತ್ರವಲ್ಲ, ಗಂಡಂದಿರ, ಸರ್ಕಾರದ, ಸೈಕಿಯಾಟ್ರಿಸ್ಟ್‌ಗಳ ನಿದ್ದೆ ಕೆಡಿಸಿದೆ.
ಒಬ್ಬಂಟಿಯಾಗಿರುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿರುವ ‘ಇಂಟೆಲಿಜೆಂಟ್’ ದೆವ್ವ ಅತ್ಯಾಚಾರ ಮಾಡಿ ಯಾರಿಗೂ ಕಾಣದಂತೆ ಕ್ಷಣಮಾತ್ರದಲ್ಲಿ ಮಾಯವಾಗುತ್ತಿದೆ. ಇಲ್ಲಿಯವರೆಗೆ ಯಾರ ಕಣ್ಣಿಗೂ ಸರಿಯಾಗಿ ಕಂಡುಬಂದಿಲ್ಲ.
ಎಲ್ಲಿಂದಲೋ ಪ್ರತ್ಯಕ್ಷವಾಗುವ ಈ ದೆವ್ವ ಕಳೆದ ಗುರುವಾರವಷ್ಟೇ ಮೂರು ಮಹಿಳೆಯರ ಶೀಲಹರಣಮಾಡಿದೆ. ಮೆಕ್ಯಾನಿಕ್ ಆಗಿರುವ ಮಹಮ್ಮದ್ ತನ್ನ ಪಕ್ಕದ ಮನೆಯ ಮಹಿಳೆಯನ್ನು ಹಿಂದಿನ ದಿನವಷ್ಟೇ ಬಲಾತ್ಕಾರ ಮಾಡಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಈ ಕಾಣದ ಕೈವಾಡವನ್ನು ಬಯಲಿಗೆಳೆಯಲು ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ. ನಗರದ ಗಂಡಸರೆಲ್ಲ ಗಸ್ತು ತಿರುಗುತ್ತಿದ್ದಾರೆ. ಮಹಿಳೆಯರೆಲ್ಲ ಮುದುಡಿ ಮೂಲೆ ಹಿಡಿದು ಕುಳಿತಿದ್ದಾರೆ. ಆದರೆ, ದೆವ್ವದ ಸುಳಿವೂ ಇಲ್ಲಿಯವರೆಗೂ ಸಿಕ್ಕಿಲ್ಲ.
ಇದು ಯಾರು ಮಾಡಿರುವ ಅಪರಾಧವೂ ಅಲ್ಲ. ಯಾವ ಅಚ್ಯಾಚಾರವೂ ನಡೆದಿಲ್ಲ. ಇದು ಸಮೂಹ ಸನ್ನಿ ಎಂದು ಸೈಕಿಯಾಟ್ರಿಸ್ಟ್‌ಗಳು ಹೇಳಿದ್ದಕ್ಕೆ ಪೊಲೀಸರು ಸದ್ಯಕ್ಕಂತೂ ಕಿವಿಕೊಟ್ಟಿಲ್ಲ.
ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯರನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದಲ್ಲಿ ಸತ್ಯ ತಾನೇ ಹೊರಬೀಳುತ್ತದೆ. ಆ ಮಹಿಳೆಯರು ಮುಂದೆ ಬಂದಾರೆಯೆ?
ಮುಖಪುಟ / ವಾಟ್ಸ್ ಹಾಟ್












Click it and Unblock the Notifications