ರೈಲುಗಳಲ್ಲಿ ಕೆಎಂಎಫ್ ಹಾಲು-ಮಜ್ಜಿಗೆ ; ನೀಡಬೇಕಿದೆ ಲಾಲೂ ಒಪ್ಪಿಗೆ
ರೈಲುಗಳಲ್ಲಿ ಕೆಎಂಎಫ್ ಹಾಲು-ಮಜ್ಜಿಗೆ ; ನೀಡಬೇಕಿದೆ ಲಾಲೂ ಒಪ್ಪಿಗೆ
ಹೈನು ಉತ್ಪನ್ನಗಳ ರೈಲಿನಲ್ಲಿ ಮಾರಾಟ ಮಾಡುವ ಕುರಿತು ರೈಲ್ವೆ ಸಚಿವಾಲಯದೊಂದಿಗೆ ಶೀಘ್ರವೇ ಮಾತುಕತೆ
ದೇಸೀ ಪಾನೀಯಗಳನ್ನು ಜನಪ್ರಿಯಗೊಳಿಸಲು ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)ದ ಹೈನು ಉತ್ಪನ್ನಗಳನ್ನು ರೈಲಿನಲ್ಲಿ ಮಾರಾಟ ಮಾಡುವ ಸಾಧ್ಯತೆಗಳ ಕುರಿತು ಎಲ್ಲ ಪ್ರಯತ್ನ ನಡೆಸಲಾಗುವುದು. ಕೇಂದ್ರ ರೈಲ್ವೆ ಸಚಿವಾಲಯದೊಂದಿಗೆ ಈ ಕುರಿತು ಶೀಘ್ರವೇ ಮಾತುಕತೆ ನಡೆಸಲಾಗುವುದು ಎಂದು ಪಶು ಸಂಗೋಪನಾ ಸಚಿವ ಮಿರಾಜುದ್ದೀನ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೆಎಂಎಫ್‌ನ ಉತ್ಪನ್ನಗಳಾದ ಪ್ಯಾಶ್ಚರೀಕೃತ ಹಾಲು, ಪೇಡ, ಮೈಸೂರು ಪಾಕ್ ಹಾಗೂ ಮಸಾಲ ಮಜ್ಜಿಗೆಗಳು ಈಗಾಗಲೇ ಜನಪ್ರಿಯತೆ ಗಳಿಸಿವೆ. ನೇಪಾಳ, ಫಿಲಿಫೈನ್ಸ್ ಸೇರಿದಂತೆ ವಿವಿಧ ದೇಶಗಳಿಗೆ ಕೆಎಂಎಫ್ ಹಾಲಿನಪುಡಿಯನ್ನು ರಫ್ತು ಮಾಡುತ್ತಿದೆ. ಮಾರುಕಟ್ಟೆಯ ವಿಸ್ತರಣೆಯ ಅಂಗವಾಗಿ ರೈಲಿನಲ್ಲಿ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಮಿರಾಜುದ್ದೀನ್ ಹೇಳಿದರು.
ಅಂಗನವಾಡಿ ಮಕ್ಕಳಿಗೆ ಹಾಲು ನೀಡುವ ಉದ್ದೇಶವೂ ಸರ್ಕಾರಕ್ಕಿದ್ದು , ಈ ಕುರಿತು ರೂಪುರೇಷೆ ರಚಿಸಲಾಗುತ್ತಿದೆ ಎಂದು ಸಚಿವ ಮಿರಾಜುದ್ದೀನ್ ಪಾಟೀಲ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications