ತಮಿಳ್ನಾಡಿನಲ್ಲಿ ಮತ್ತೊಂದು ಅಗ್ನಿ ದುರಂತ ; ನೂರಾರು ಮಕ್ಕಳ ದಹನ

ತಮಿಳ್ನಾಡಿನಲ್ಲಿ ಮತ್ತೊಂದು ಅಗ್ನಿ ದುರಂತ ; ನೂರಾರು ಮಕ್ಕಳ ದಹನ
ಕುಂಭಕೋಣಂನ ಶಾಲೆಯಲ್ಲಿ ಮಸಣ ಸದೃಶ ವಾತಾವರಣ

ಕುಂಭಕೋಣಂ : ತಮಿಳುನಾಡಿನ ಕುಂಭಕೋಣಂನಲ್ಲಿನ ಕಾಸಿರಾಮನ್‌ ಸ್ಟ್ರೀಟ್‌ನ ಲಾರ್ಡ್‌ ಕೃಷ್ಣ ಶಾಲೆಯಲ್ಲಿ ಶುಕ್ರವಾರ (ಜು.16) ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 100 ಮಕ್ಕಳು ಸಾವಿಗೀಡಾಗಿದ್ದಾರೆ.

ಶಾಲೆಯ ಅಡುಗೆಮನೆಯಲ್ಲಿ ಶುಕ್ರವಾರ ಬೆಳಗ್ಗೆ ಕಾಣಿಸಿಕೊಂಡ ಬೆಂಕಿ ವ್ಯಾಪಕವಾಗಿ ಈ ದುರಂತ ಸಂಭವಿಸಿದೆ. ಕನಿಷ್ಠ 100 ಮಕ್ಕಳು ಸಾವಿಗೀಡಾಗಿದ್ದು , ಹಲವು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕುಂಭಕೋಣಂನ ಸರ್ಕಾರಿ ಆಸ್ಪತ್ರೆ ಹಾಗೂ ಇತರ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ಶಾಲೆಯಲ್ಲಿ ಸುಮಾರು 900 ಮಕ್ಕಳಿದ್ದರು. ಐದು ಕೊಠಡಿಗಳಿಗೆ ಬೆಂಕಿ ವ್ಯಾಪಿಸಿ ಈ ದುರಂತ ಸಂಭವಿಸಿದೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಹೆಣ್ಣುಮಕ್ಕಳು ಎಂದು ತಂಜಾವೂರು ಜಿಲ್ಲಾ ಕಲೆಕ್ಟರ್‌ ಕೆ.ರಾಧಾಕೃಷ್ಣನ್‌ ತಿಳಿಸಿದ್ದಾರೆ.

ಗಾಯಗೊಂಡ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಿಕ್ಕಟ್ಟನ್ನು ಎದುರಿಸುವಲ್ಲಿ ನೆರವು ನೀಡುವಂತೆ ನೆರೆಯ ಜಿಲ್ಲೆಗಳ ವೈದ್ಯರನ್ನೂ ಕೇಳಲಾಗಿದೆ ಎಂದು ರಾಧಾಕೃಷ್ಣನ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ಜನವರಿಯಲ್ಲಿ ತಮಿಳುನಾಡಿನ ಶ್ರೀರಂಗಂನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 50 ಮಂದಿ ಸಾವಿಗೀಡಾಗಿದ್ದರು. ಮದುವೆ ಛತ್ರವೊಂದರಲ್ಲಿ ಆ ದುರಂತ ಸಂಭವಿಸಿತ್ತು .

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+