Get Updates
Get notified of breaking news, exclusive insights, and must-see stories!

ವಿಶ್ವೇಶ್ವರಯ್ಯ ಟ್ರಸ್ಟ್‌ನಿಂದ ಸಾಹಿತ್ಯ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ

ವಿಶ್ವೇಶ್ವರಯ್ಯ ಟ್ರಸ್ಟ್‌ನಿಂದ ಸಾಹಿತ್ಯ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ
ಪುಸ್ತಕ ಕಳುಹಿಸಲು ಕೊನೆಯ ದಿನಾಂಕ ಜುಲೈ 31

ಬೆಂಗಳೂರು : ಭಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಪ್ರತಿಷ್ಠಾನ 2004ನೇ ಸಾಲಿನ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿಗಳಿಗಾಗಿ ಪುಸ್ತಕಗಳನ್ನು ಆಹ್ವಾನಿಸಿದೆ.

1994ರಿಂದ ಈವರೆಗೆ ಪ್ರಕಟವಾದ ಪುಸ್ತಕಗಳನ್ನು ಪ್ರಶಸ್ತಿಗಾಗಿ ಕಳುಹಿಸಬಹುದು. ಆಯ್ಕೆಯಾದ 5 ಕೃತಿಗಳ ಲೇಖಕರಿಗೆ ತಲಾ 5 ಸಾವಿರ ರುಪಾಯಿ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.

ವಿವರಗಳನ್ನು ಗಮನಿಸಿ :

  • ಅನ್ಯ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ಯಾವುದೇ ಪ್ರಕಾರದ ಕೃತಿಗಳನ್ನು ಕಳುಹಿಸಬಹುದು. ಪುಸ್ತಕದ 3 ಪ್ರತಿಗಳನ್ನು ಕುಹಿಸಬೇಕು.
  • ಹಸ್ತಪ್ರತಿಗಳಿಗೆ ಅವಕಾಶವಿಲ್ಲ .
  • ಕೃತಿಗಳೊಂದಿಗೆ ಸ್ವ ವಿವರ ಹಾಗೂ ಎರಡು ಫೋಟೊ ಕಳುಹಿಸಿ.
  • 10ನೇ ತರಗತಿಯಾಳಗೆ ಇದ್ದಾಗಲೇ ಕೃತಿಗಳನ್ನು ಪ್ರಕಟಿಸಿರುವ 20 ವರ್ಷ ಮೇಲ್ಪಟ್ಟ ಲೇಖಕರೂ ಕೂಡ ತಮ್ಮ ಪುಸ್ತಕಗಳನ್ನು ಕಳುಹಿಸಬಹುದು. ಆಯ್ಕೆಯಾದ ಕೃತಿಗಳಿಗೆ 2 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಲಾಗುವುದು.
  • ಪುಸ್ತಕ ಕಳುಹಿಸಲು ಕೊನೆ ದಿನ- ಜುಲೈ 31, 2004.
ಪುಸ್ತಕ ಕಳುಹಿಸಬೇಕಾದ ಹಾಗೂ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ :

ರಮೇಶ ಸುರ್ವೆ, ಅಧ್ಯಕ್ಷರು, ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಪ್ರತಿಷ್ಠಾನ, ನಂ.468, 1ನೇ ಮಹಡಿ, 13ನೇ ಮುಖ್ಯರಸ್ತೆ , 3ನೇ ಹಂತ, ಮಂಜುನಾಥ ನಗರ, ಬೆಂಗಳೂರು- 560010. ದೂರವಾಣಿ - (080) 23235970.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+