ಸ್ಟಾಂಪಿಟ್ ಅಧಿಕಾರಿಗಳಿಂದ ದಾಖಲೆಗಳ ನಾಶ : ಸಂಗ್ರಾಮ್ ಆರೋಪ
ಸ್ಟಾಂಪಿಟ್ ಅಧಿಕಾರಿಗಳಿಂದ ದಾಖಲೆಗಳ ನಾಶ : ಸಂಗ್ರಾಮ್ ಆರೋಪ
ಮಾಜಿ ಮುಖ್ಯಮಂತ್ರಿ ಕೃಷ್ಣ ಮತ್ತು ಖರ್ಗೆಯತ್ತ ಮಾಜಿ ಎಸಿಪಿ ಬೊಟ್ಟು
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ಆಗಿನ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಅಣತಿಯಂತೆ ಸ್ಟಾಂಪಿಟ್ ಅಧಿಕಾರಿಗಳಾದ ಎಜಿಡಿಪಿ ಶ್ರೀಕುಮಾರ್ ಮತ್ತು ಡಿಐಐ ಔರಾದಕರ್ ಅವರು ಛಾಪಾ ಕಾಗದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾಶಮಾಡಿದ್ದಾರೆ ಎಂದು ಸಂಗ್ರಾಮ್‌ಸಿಂಗ್ ಅವರು ಮೊದಲ ಎಸಿಎಮ್‌ಎಮ್ ನ್ಯಾಯಾಧೀಶರ ಮುಂದೆ ಮಂಗಳವಾರ ಹೇಳಿಕೆ ನೀಡಿದರು.
ವೀರಪ್ಪನ್‌ನಿಂದ ಅಪಹರಣಕ್ಕೊಳಗಾಗಿದ್ದ ರಾಜಕುಮಾರ್‌ರನ್ನು ಬಿಡಿಸಿಕೊಂಡು ಬರಲು ಕೃಷ್ಣ ಸರ್ಕಾರ 20 ಕೋಟಿ ಹಣ ನೀಡಿದೆ ಎಂದು ಮೊದಲ ಬಾಂಬ್ ಇಟ್ಟಿದ್ದ ಸಂಗ್ರಾಮ್ ಸಿಂಗ್ ನ್ಯಾಯಾಧೀಶ ವಿ.ಎಚ್. ಸಾಂಬ್ರಾಣಿಯವರ ಮುಂದೆ ಸ್ವಇಚ್ಛೆಯಿಂದ ದಾಖಲೆ ನಾಶಪಡಿಸಿದ ಬಗ್ಗೆ ಹೇಳಿಕೆ ನೀಡಿದರು.
ಕೃಷ್ಣ ಮತ್ತು ಖರ್ಗೆಯವರನ್ನು ಛಾಪಾಕೂಪದಿಂದ ಪಾರುಮಾಡಿದರೆ ಬೆಂಗಳೂರಿನ ಪೊಲೀಸ್ ಆಯುಕ್ತ ಹುದ್ದೆ ನೀಡುವುದಾಗಿ ಶ್ರೀಕುಮಾರ್‌ಗೆ ಭರವಸೆ ನೀಡಲಾಗಿತ್ತು. ಈ ಆಮಿಷಕ್ಕೊಳಗಾಗಿ ಶ್ರೀಕುಮಾರ್ ಅವರು ದಾಖಲೆಗಳನ್ನು ಸರ್ವನಾಶ ಮಾಡಿದ್ದಾರೆ. ಅಪ್ರಯೋಜಕ ದಾಖಲೆಗಳನ್ನು ಸಿಬಿಏಗೆ ನೀಡಲಾಗಿದೆ ಎಂದು ಸಂಗ್ರಾಮ್‌ಸಿಂಗ್ ತಿಳಿಸಿದರು.
ಛಾಪಾಕೂಪದಲ್ಲಿ ಭಾಗಿಯಾಗಿರುವ ರಾಜಕಾರಣಿಗಳ ಬಗ್ಗೆ ಶ್ರೀಕುಮಾರ್ ಮತ್ತು ಔರಾದಕರ್ ಅವರಿಗೆ ತಿಳಿಸಿದಾಗ ತಮ್ಮನ್ನು ಬೆದರಿಸಲಾಯಿತು ಎಂದು ಅವರು ತಿಳಿಸಿದರು.
ಮಾನಸಿಕವಾಗಿ ಸ್ವಸ್ಧ : ಮಾನಸಿಕವಾಗಿ ಅಸ್ವಸ್ಥರಾಗಿದ್ದು, ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಸಂಗ್ರಾಮ್ ಸಿಂಗ್ ಸಾರಾಸಗಟಾಗಿ ತಳ್ಳಿಹಾಕಿದ್ದು, ತಾವು ಸ್ವಸ್ಥರಾಗಿರುವುದಾಗಿ ನ್ಯಾಯಾಧೀಶರಿಗೆ ತಿಳಿಸಿದರು.
ವಿಪರೀತ ಛಳಿ ಇದ್ದರೂ ಸಿಬಿಐ ಅಧಿಕಾರಿಗಳು ತಮ್ಮನ್ನು ಕೇವಲ ಸುದ್ದಿ ಪತ್ರಿಕೆಗಳ ಮೇಲೆ ಮಲಗಿಸಿದ್ದರು ಮತ್ತು ಹೊದ್ದುಕೊಳ್ಳಲು ತೆಳ್ಳಗಿನ ಹೊದಿಕೆ ನೀಡಿದ್ದರೆಂದು ಅವರು ಆರೋಪಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications