ಛಾಪಾ ತನಿಖೆ ಚುರುಕು: ಸಿಬಿಐನಿಂದ ಬೆಂಗಳೂರು ವೈದ್ಯರಿಬ್ಬರ ತನಿಖೆ
ಛಾಪಾ ತನಿಖೆ ಚುರುಕು: ಸಿಬಿಐನಿಂದ ಬೆಂಗಳೂರು ವೈದ್ಯರಿಬ್ಬರ ತನಿಖೆ
ವಿಕ್ಟೋರಿಯಾ ಆಸ್ಪತ್ರೆಯ ಡಾ.ಚೆನ್ನಕೇಶನ್ ಹಾಗೂ ಡಾ.ಜ್ಞಾನೇಂದ್ರರ ವಿಚಾರಣೆ
ಛಾಪಾ ಪಾಪದ ಪ್ರಮುಖ ಆರೋಪಿ ಕರೀಂಲಾಲ ತೆಲಗಿಗೆ ಆತ ನ್ಯಾಯಾಂಗ ವಶದಲ್ಲಿದ್ದ ಸಂದರ್ಭದಲ್ಲಿ ಚಿಕಿತ್ಸೆ ನೀಡಿದ್ದ ವಿಕ್ಟೋರಿಯಾ ಆಸ್ಪತ್ರೆಯ ಡಾ.ಚೆನ್ನಕೇಶನ್ ಹಾಗೂ ಡಾ.ಜ್ಞಾನೇಂದ್ರ ಅವರ ವಿಚಾರಣೆಯನ್ನು ಸಿಬಿಐ ಬುಧವಾರ ನಡೆಸಿತು. ಸುಮಾರು 4 ತಾಸುಗಳ ಕಾಲ ವಿಚಾರಣೆ ನಡೆಯಿತು.
ಕಣ್ಣಿನ ಚಿಕಿತ್ಸೆಗಾಗಿ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದ ಡಾ.ಜ್ಞಾನೇಂದ್ರ ಅವರ ವಿಚಾರಣೆ ಆಸ್ಪತ್ರೆಯಲ್ಲೇ ನಡೆಯಿತು. ಡಾ.ಚನ್ನಕೇಶನ್‌ರ ವಿಚಾರಣೆ ವಿಕ್ಟೋರಿಯಾ ಅಸ್ಪತ್ರೆಯಲ್ಲಿಯೇ ನಡೆಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳ ಕಾರಣದಿಂದಾಗಿ ತೆಲಗಿ ಆಸ್ಪತ್ರೆಗೆ ದಾಖಲಾಗುವುದು ಒಳಿತು ಎಂದು ಈ ಇಬ್ಬರು ವೈದ್ಯರು ಶಿಫಾರಸ್ಸು ಮಾಡಿದ್ದರು. ಈ ಶಿಫಾರ್ಸಸಿನ ಮೇರೆಗೆ ತೆಲಗಿ ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿದ್ದ .
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications