ಜಿಲ್ಲೆ ವಿಭಜನೆ ಅಸಾಧ್ಯ; ಹೊಸ ತಾಲ್ಲೂಕು ರಚನೆ ಪರಿಶೀಲನೆಯಲ್ಲಿದೆ

ಜಿಲ್ಲೆ ವಿಭಜನೆ ಅಸಾಧ್ಯ; ಹೊಸ ತಾಲ್ಲೂಕು ರಚನೆ ಪರಿಶೀಲನೆಯಲ್ಲಿದೆ
ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಸರ್ಕಾರದ ನಿರ್ಧಾರ

ಬೆಂಗಳೂರು : ಗುಲ್ಬರ್ಗಾ ಸೇರಿದಂತೆ ಯಾವುದೇ ದೊಡ್ಡ ಜಿಲ್ಲೆಯ ವಿಭಜನೆಯ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಕಂದಾಯ ಸಚಿವ ಎಂ.ಪಿ.ಪ್ರಕಾಶ್‌, ಬೇಡಿಕೆ ಬಂದಲ್ಲಿ ಹೊಸ ತಾಲ್ಲೂಕುಗಳ ರಚನೆಯನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಯಾವುದೇ ದೊಡ್ಡ ಜಿಲ್ಲೆಯ ವಿಭಜನೆಯ ಉದ್ದೇಶ ಸರ್ಕಾರಕ್ಕಿಲ್ಲ . ಆದರೆ ಬೇಡಿಕೆ ಬಂದಲ್ಲಿ ಹೊಸ ತಾಲ್ಲೂಕುಗಳ ರಚನೆಯನ್ನು ಪರಿಶೀಲಿಸಲಾಗುವುದು. ಹೊಸ ತಾಲ್ಲೂಕುಗಳ ರಚನೆಯ ಸಂಬಂಧ ಹಣಕಾಸು ನೆರವು ಒದಗಿಸುವಂತೆ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಹಾಗೂ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸಂಪರ್ಕಿಸಲಾಗುವುದು ಎಂದು ಸಚಿವ ಎಂ.ಪಿ. ಪ್ರಕಾಶ್‌ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರತಿ ಹೊಸ ತಾಲ್ಲೂಕು ರಚನೆಗೆ ಕನಿಷ್ಠ 50 ಲಕ್ಷ ರುಪಾಯಿ ಬೇಕೆಂದು ಅಂದಾಜು ಮಾಡಲಾಗಿದೆ. ಆ ಕಾರಣದಿಂದಾಗಿ ಹಣಕಾಸು ನೆರವು ದೊರೆಯದ ಹೊರತು ತಾಲ್ಲೂಕು ರಚನೆಯ ಕುರಿತು ನಿರ್ದಿಷ್ಟ ಪ್ರಕಟಣೆಯನ್ನು ಹೊರಡಿಸುವುದು ಸಾಧ್ಯವಿಲ್ಲ ಎಂದು ಪ್ರಕಾಶ್‌ ಹೇಳಿದರು.

ನೂತನ ತಾಲ್ಲೂಕುಗಳನ್ನು ರಚಿಸಿದರೂ, ಜಿಲ್ಲೆಯ ನಕ್ಷೆ ಹಾಗೂ ವ್ಯಾಪ್ತಿಯಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ ಎಂದು ಪ್ರಕಾಶ್‌ ಸ್ಪಷ್ಟಪಡಿಸಿದರು. ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಸರ್ಕಾರ ನಿರ್ಧರಿಸಿದೆ ಎಂದೂ ಅವರು ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+