ಹಾಸ್ಯ- ಪಾಯಸ : ಹೀಗೊಂದು ಹಬ್ಬ

ಹಾಸ್ಯ- ಪಾಯಸ : ಹೀಗೊಂದು ಹಬ್ಬ
ಹಾಸ್ಯ ಆಮೋದಕರ ಪಾಯಸ ರುಚಿಕರ; ಹಬ್ಬಗಳಿಲ್ಲದ ಆಷಾಢದ ಒಂದು ಭಾನುವಾರ (ದಿನಾಂಕ 18.7.2004)ಹಾಸ್ಯ ಪಾಯಸ ಹಬ್ಬಕ್ಕೆ ಆಸಕ್ತರಿಗೆಲ್ಲ ಆಹ್ವಾನ.

ಬೆಂಗಳೂರಿನಲ್ಲಿ ಪಾಕೋತ್ಸವ ನಡೆಸಿ ಹವ್ಯಕರ ವಿಶಿಷ್ಟ ಆಹಾರವನ್ನು ಪರಿಚಯಿಸಿದ ಶ್ರೀ ರಾಮಚಂದ್ರಾಪುರದ ಬೆಂಗಳೂರು ಪ್ರಾಂತ ಪ್ರತಿನಿಧಿ ಪರಿಷತ್ತು ಇನ್ನೊಂದು ಹೊಸ ಕಾರ್ಯಕ್ರಮವನ್ನು ಆಯೋಜಿಸಿದೆ. ದಿನಾಂಕ 18.7.2004 ಭಾನುವಾರದಂದು ಪೂರ್ವಾಹ್ನ 11.00 ಗಂಟೆಯಿಂದ ಸಂಜೆಯ ತನಕ ಈ ಹಾಸ್ಯ ಪಾಯಸ ಕಾರ್ಯಕ್ರಮ ಜನರನ್ನು ಮುದಗೊಳಿಸಲಿದೆ.

ಅಂದು ನಾಡಿನ ಪ್ರಸಿದ್ಧ ಹಾಸ್ಯ ಸಾಹಿತಿಗಳ ವಾಗ್ಮಿಗಳ ನಗೆ ಹಬ್ಬ ನಡೆಯಲಿದೆ. ಮಾಸ್ಟರ್‌ ಹಿರಣ್ಣಯ್ಯ, ವಿಶ್ವೇಶ್ವರ ಭಟ್ಟ, ಡಾ. ಗಿರಿಧರ ಕಜೆ, ಡಾ. ಬಿ.ಆರ್‌. ಲಕ್ಷ್ಮಣ ರಾವ್‌, ಎಂ. ಎನ್‌. ವ್ಯಾಸರಾವ್‌, ವೈ.ವಿ. ಗುಂಡೂರಾವ್‌, ಡಾ. ಎಂ.ಎಚ್‌. ಶ್ರೀಕಂಠಯ್ಯ ಮುಂತಾದವರು ರಸಿಕರಿಗೆ ಹಾಸ್ಯರಸಾಯನವನ್ನು ಉಣಬಡಿಸಿದರೆ, ನಗರದಲ್ಲಿ ಸಾತ್ವಿಕ ಅಡುಗೆಗೆ ಪ್ರಸಿದ್ಧವಾದ ಮಹೇಶ ಹೆಗಡೆಯ ಪಾಕಶಾಸ್ತ ್ರತಂಡ ಹವ್ಯಕರ ಮೂವತ್ತೆರಡು ಬಗೆಯ ವಿಶಿಷ್ಟ ಪಾಯಸಮಹಾಮೇಳವನ್ನು ನಡೆಸಲಿದ್ದಾರೆ. ಹಲಸಿನ ಹಣ್ಣಿನ, ಬಾಳೆಹಣ್ಣಿನ, ತರಕಾರಿಗಳ, ಗಡ್ಡೆಗೆಣಸುಗಳ, ಬೇಳೆಕಾಳುಗಳ, ಅಕ್ಕಿಯ, ಮಾವಿನ ಹಣ್ಣಿನ, ಖರ್ಜೂರದ, ಶಾವಿಗೆಯ ಪಾಯಸಗಳು ಮೇಳೈಸಲಿವೆ. ಇವುಗಳೊಂದಿಗೆ ಚಪ್ಪರಿಸುವ ಉಪ್ಪಿನಕಾಯಿ ಸಂಪೂರ್ಣ ಉಚಿತವಾಗಲಿದೆ. ಆರೋಗ್ಯಕ್ಕೆ ಹಾನಿಯನ್ನೆಸಗದ ಪಾಯಸಗಳನ್ನು ಬಾಯಿ ಸವಿಗಾದರೆ, ಹಾಸ್ಯ ರಸಾಯನ ಬುದ್ಧಿಗೌತಣವಾಗಲಿದೆ. ಪಾಯಸದ ಸಂಗಾತಿಗಳಾಗಿ ಮಧ್ಯಾಹ್ನಕ್ಕೆ ಬೇಳೆಬಾತು, ಮೊಸರನ್ನ, ಪಕೋಡಾ, ದೋಸೆಗಳು ಸೇರಲಿವೆ. ನಗು ಆರೋಗ್ಯ ವರ್ಧಕ; ಹಾಗೆ ಪಾಯಸ ಆರೋಗ್ಯಕ್ಕೆ ಆಹಾರ. ಹಬ್ಬಗಳಿಲ್ಲದ ಆಷಾಢದ ಒಂದು ಭಾನುವಾರ ಹಾಸ್ಯ ಪಾಯಸ ಹಬ್ಬಕ್ಕೆ ಆಸಕ್ತರಿಗೆಲ್ಲ ಆಹ್ವಾನ. ಕತ್ತಲಾಗತ್ತಿದ್ದಂತೆ ತೆಂಕು ತಿಟ್ಟಿನ ಯಕ್ಷಗಾನ ಕಳೆಕಟ್ಟಲಿದೆ.

ಹೆಚ್ಚಿನ ಮಾಹಿತಿಗಾಗಿ: 26727510/ 9448061678 (ಶ್ರೀರಾಮಾಶ್ರಮ, ಗಿರಿನಗರ)


ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+