ಖಾಲಿ ರೈಲಿನಲ್ಲಿ ನಿದ್ದೆಹೋದ ಪೂಜಾರಿ ಜಿಲೆಟಿನ್ ಕಡ್ಡಿ ಸ್ಫೋಟಕ್ಕೆಬಲಿ
ಖಾಲಿ ರೈಲಿನಲ್ಲಿ ನಿದ್ದೆಹೋದ ಪೂಜಾರಿ ಜಿಲೆಟಿನ್ ಕಡ್ಡಿ ಸ್ಫೋಟಕ್ಕೆಬಲಿ
ಪೂಜಾರಿಯಿಂದಲೇ ಜಿಲೆಟಿನ್ ಕಡ್ಡಿ ಸಾಗಣೆ - ಪೊಲೀಸರ ಶಂಕೆ
ಲಾಲ್‌ಗುಡಾ ದೇಗುಲದಲ್ಲಿ ಪೂಜಾರಿಯಾಗಿರುವ ನರಸಿಂಹಾಚಾರ್ ಎನ್ನುವ ವ್ಯಕ್ತಿ ಸಾವಿಗೀಡಾದ ನತದೃಷ್ಟ . ಜುಲೈ 12ರ ಸೋಮವಾರ ರಾತ್ರಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್-ಚಿತ್ತಾಪುರ ರೈಲಿನಲ್ಲಿ ಸೋಮವಾರ ರಾತ್ರಿ ಚಿತ್ತಾಪುರಕ್ಕೆ ಬಂದ ನರಸಿಂಹಾಚಾರ್, ಸಂಭಾವನೆ ದೊರಕದ ಕಾರಣ ತನ್ನ ಹಳ್ಳಿಗೆ ಹೋಗುವ ಬದಲು ರೈಲ್ವೇ ನಿಲ್ದಾಣದಲ್ಲಿ ಉಳಿದುಕೊಂಡಿದ್ದಾನೆ. ಆತನೊಂದಿಗೆ ಇನ್ನೂ ಇಬ್ಬರು ವ್ಯಕ್ತಿಗಳಿದ್ದು, ಮೂವರೂ ಮದ್ಯ ಸೇವಿಸಿ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದಾರೆ. ರಾತ್ರಿ ಒಂದು ಹೊತ್ತಿನಲ್ಲಿ ಖಾಲಿಯಿದ್ದ ರೈಲ್ವೆ ಬೋಗಿ ಪ್ರವೇಶಿಸಿರುವ ನರಸಿಂಹಾಚಾರ್, ರೈಲಿನಲ್ಲಿ ನಿದ್ದೆ ಹೋದ ಸಂದರ್ಭದಲ್ಲಿ ಜಿಲೆಟಿನ್ ಕಡ್ಡಿಗಳು ಸಿಡಿದಿವೆ. ಈ ಸ್ಫೋಟದಲ್ಲಿ ನರಸಿಂಹಾಚಾರ್ ತಲೆ ಚೂರುಚೂರಾಗಿದೆ.
ಕಲ್ಲು ಒಡೆಯುವ ಉದ್ದೇಶಕ್ಕಾಗಿ ಜಿಲೆಟಿನ್ ಕಡ್ಡಿಗಳನ್ನು ಸಾವಿಗೀಡಾದ ನರಸಿಂಹಾಚಾರ್ ಸಾಗಿಸುತ್ತಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಮುಂದುವರೆದಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications