ಡಿಸಿಎಂ ಸಿದ್ಧರಾಮಯ್ಯ ಹಾಗೂ ವಿಶ್ವಬ್ಯಾಂಕ್ ಅಧಿಕಾರಿಗಳ ಮಾತುಕತೆ
ಡಿಸಿಎಂ ಸಿದ್ಧರಾಮಯ್ಯ ಹಾಗೂ ವಿಶ್ವಬ್ಯಾಂಕ್ ಅಧಿಕಾರಿಗಳ ಮಾತುಕತೆ
ಆಗಸ್ಟ್- ಸೆಪ್ಟಂಬರ್ ತಿಂಗಳಲ್ಲಿ ರಾಜ್ಯಕ್ಕೆ ಅಧಿಕಾರಿಗಳ ಮತ್ತೊಂದು ತಂಡ
ವಿಶ್ವಬ್ಯಾಂಕ್‌ನ ಭಾರತೀಯ ನಿರ್ದೇಶಕ ಕಾರ್ಟರ್ ನೇತೃತ್ವದ ಅಧಿಕಾರಿಗಳ ತಂಡ ಹಣಕಾಸು ಸಚಿವರೂ ಆದ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಬಡತನ ನಿರ್ಮೂಲನೆ ಕಾರ್ಯಕ್ರಮಗಳ ಕುರಿತು ಚರ್ಚಿಸಿತು. ಆಗಸ್ಟ್ ಅಥವಾ ಸೆಪ್ಟಂಬರ್ ತಿಂಗಳಲ್ಲಿ ಅಧಿಕಾರಿಗಳ ಮತ್ತೊಂದು ತಂಡ ರಾಜ್ಯಕ್ಕೆ ಭೇಟಿ ನೀಡಲಿದ್ದು , ಆ ಸಂದರ್ಭದಲ್ಲಿ ನೆರವಿನ ಪ್ರಮಾಣ ಮತ್ತು ಪಾತ್ರ ಸ್ಪಷ್ಟಗೊಳ್ಳಲಿದೆ.
ವಿಶ್ವಬ್ಯಾಂಕ್ ಅಧಿಕಾರಿಗಳ ಭೇಟಿಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ಧರಾಮಯ್ಯ- ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಹೆಚ್ಚು ವಾಸಿಸುತ್ತಿರುವ 12 ರಾಜ್ಯಗಳನ್ನು ವಿಶ್ವಬ್ಯಾಂಕ್ ಗುರ್ತಿಸಿದ್ದು , ಈ ಪಟ್ಟಿಯಲ್ಲಿ ಕರ್ನಾಟಕವೂ ಸ್ಥಾನ ಪಡೆದಿದೆ. ಸಾಕ್ಷರತೆ ಪ್ರಮಾಣ ಹೆಚ್ಚಳ, ಆರೋಗ್ಯ ಸಂರಕ್ಷಣೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ನೆರವು ನೀಡಲು ವಿಶ್ವಬ್ಯಾಂಕ್ ಉದ್ದೇಶಿಸಿದೆ ಎಂದರು.
ರಾಜ್ಯದ ಕುರಿತು ವಿಶ್ವಬ್ಯಾಂಕ್ ವಿಶೇಷ ಗಮನ ನೀಡಿದೆ. ಪ್ರಸ್ತುತ ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ವಿಶ್ವಬ್ಯಾಂಕ್ ಹಣ ಸಹಾಯ ನೀಡಿದೆ ಎಂದು ಸಿದ್ಧರಾಮಯ್ಯ ಹೇಳಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications