ಕೃಷ್ಣ ಹಾಗೂ ಖರ್ಗೆಯನ್ನು ‘ಮಂಪರು ಪರೀಕ್ಷೆ’ಗೆ ಒಳಪಡಿಸಿ -ಬಿಜೆಪಿ
ಕೃಷ್ಣ ಹಾಗೂ ಖರ್ಗೆಯನ್ನು ‘ಮಂಪರು ಪರೀಕ್ಷೆ’ಗೆ ಒಳಪಡಿಸಿ -ಬಿಜೆಪಿ
ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆಗೆ ಯಡಿಯೂರಪ್ಪ ಒತ್ತಾಯ
ಕೇಂದ್ರ ಸಚಿವ ಗುಲಾಂ ನಬಿ ಆಜಾದ್, ರಾಜ್ಯ ಜಲ ಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸೇರಿದಂತೆ ಸಂಗ್ರಾಂ ಸಿಂಗ್ ಹೆಸರಿಸಿರುವ ಎಲ್ಲ ನಾಯಕರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಇದರಿಂದ ಸತ್ಯ ಬಯಲಾಗುತ್ತದೆ ಎಂದು ಸೋಮವಾರ (ಜು. 12) ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಒತ್ತಾಯಿಸಿದರು.
ಜಲ ಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ, ಮುಖ್ಯಮಂತ್ರಿ ಧರ್ಮಸಿಂಗ್‌ರನ್ನು ಮುಜುಗರದಿಂದ ಪಾರು ಮಾಡಬೇಕು ಎಂದು ಯಡಿಯೂರಪ್ಪ ಹೇಳಿದರು.
ಕಳಂಕಿತ ಸಚಿವ ರೋಷನ್‌ಬೇಗ್‌ರನ್ನು ಛಾಪ ಪಾಪದಿಂದ ಪಾರು ಮಾಡಲು ಕಾಂಗ್ರೆಸ್ ನಾಯಕರಾದ ಗುಲಾಂ ನಬಿ, ಎಸ್ಸೆಂ.ಕೃಷ್ಣ, ಖರ್ಗೆ, ಡಿ.ಕೆ.ಶಿವಕುಮಾರ್ ತಮ್ಮನ್ನು ಬಲಿಪಶುವನ್ನಾಗಿ ಮಾಡಿದ್ದರು ಎಂದು ನಿವೃತ್ತ ಪೊಲೀಸ್ ಇಕಾರಿ ಸಂಗ್ರಾಂ ಸಿಂಗ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications