ಬಿಜಾಪುರ ಜಿಲ್ಲೆಯಲ್ಲಿ ವರುಣ ವೃಷ್ಟಿ ; ಪಟ್ಟಣದ ಜನಜೀವನ ಅಸ್ತವ್ಯಸ್ತ

ಬಿಜಾಪುರ ಜಿಲ್ಲೆಯಲ್ಲಿ ವರುಣ ವೃಷ್ಟಿ ; ಪಟ್ಟಣದ ಜನಜೀವನ ಅಸ್ತವ್ಯಸ್ತ
ಹಿರೀಕರ ಚಿತ್ತಭಿತ್ತಿಯಲ್ಲಿ 1972ರ ಮಳೆಚಿತ್ರಗಳು ಮತ್ತೆ ನೆನಪಾದವು

ಬಿಜಾಪುರ : ಜುಲೈ 11 ರ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಪಟ್ಟಣದಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿತ್ತು . ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದರೆ, ವಿದ್ಯುತ್‌ ಸರಬರಾಜು ಭಾನುವಾರ ಮಧ್ಯಾಹ್ನದಿಂದಲೇ ಹಲವು ಪ್ರದೇಶಗಳಲ್ಲಿ ಕಡಿತಗೊಂಡಿತು.

ಬಿಜಾಪುರ ಹಾಗೂ ಜಿಲ್ಲೆಯ ವಿವಿಧ ಭಾಗಗಲಲ್ಲಿ ಶನಿವಾರ ಹಾಗೂ ಭಾನುವಾರ ಉತ್ತಮ ಮಳೆ ಸುರಿದಿದೆ. ಭಾನುವಾರ ಬಿಜಾಪುರ ಪಟ್ಟಣದಲ್ಲಿ 20 ಮಿಮೀ ಮಳೆ ಸುರಿದಿದೆ. ಹುಮ್ನಾಬಾದ್‌, ಬಸವಕಲ್ಯಾಣದಲ್ಲಿ 40 ಮಿಮೀ, ಔರಾದ್‌, ಭಾಲ್ಕಿಯಲ್ಲಿ 25 ಮಿಮೀ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಧಾರಾಕಾರ ಮಳೆನೀರಿನ ಒತ್ತಡ ತಡೆದುಕೊಳ್ಳಲಾರದೆ ಚರಂಡಿಗಳು ತುಂಬಿ ಹರಿಯಲಾರಂಭಿಸಿದವು. ಕೆಲವೆಡೆ ಚರಂಡಿಗಳು ಕಟ್ಟಿಕೊಂಡಿದ್ದರಿಂದಾಗಿ ರಸ್ತೆಗಳೆಲ್ಲ ಚರಂಡಿಗಳಾದವು. ವಾಹನ ಸಂಚಾರ ಅಸ್ತವ್ಯಸ್ತಗೊಂಡ ಚಿತ್ರಗಳು ಪಟ್ಟಣದಲ್ಲಿ ಮಾಮೂಲಾಗಿದ್ದವು.

ಸಾವಾಗಿ ಎರಗಿತ್ತು ಸಿಡಿಲು : ಸೋಮದೇವರ ಹಟ್ಟಿ ತಾಂಡಾದ ಸಂಜು ರಾಥೋಡ್‌ ಎನ್ನುವ 14 ರ್ವದ ಬಾಲಕ ಸಿಡಿಲು ಬಡಿದು ಸಾವಿಗೀಡಾಗಿದ್ದಾನೆ. ಮೃತನ ಸಂಬಂಧಿ ಗಜಾಬಾಯಿ ಎನ್ನುವ ಮಹಿಳೆ ಗಾಯಗೊಂಡಿದ್ದಾಳೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+