ತುಮಕೂರು ವಿವಿಗೆ ‘ಹಸಿರು ನಿಶಾನೆ’, ಪ್ರಸಕ್ತ ವರ್ಷದಿಂದಲೇಆರಂಭ
ತುಮಕೂರು ವಿವಿಗೆ ‘ಹಸಿರು ನಿಶಾನೆ’, ಪ್ರಸಕ್ತ ವರ್ಷದಿಂದಲೇಆರಂಭ
ಗೊಲ್ಲಹಳ್ಳಿ ಸಮೀಪ 300 ಎಕರೆ ಭೂಮಿ ಮಂಜೂರು
ತುಮಕೂರು ವಿಶ್ವ ವಿದ್ಯಾಲಯವನ್ನು ಪ್ರಸಕ್ತ ಶಿಕ್ಷಣ ವರ್ಷದಿಂದಲೇ ಆರಂಭಿಸಲು ಗುರುವಾರ (ಜು.8) ನಡೆದ ಸಂಪುಟ ಸಭೆ ಹಸಿರು ನಿಶಾನೆ ತೋರಿತು. ಅಲ್ಲದೆ, ಉದ್ದೇಶಿತ ವಿಶ್ವವಿದ್ಯಾಲಯಕ್ಕಾಗಿ 300 ಎಕರೆ ಭೂಮಿಯನ್ನು ತುಮಕೂರಿನ ಗೊಲ್ಲಹಳ್ಳಿ ಸಮೀಪ ಮಂಜೂರು ಮಾಡಿತು.
ನೂತನ ವಿಶ್ವವಿದ್ಯಾಲಯದ ಆರಂಭಕ್ಕೆ ಹಸಿರು ನಿಶಾನೆ ತೋರಿದ್ದರೂ- ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲಾ ವಿದ್ಯಾರ್ಥಿಗಳು ತುಮಕೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರುವ ಅಥವಾ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲೇ ಉಳಿಯುವ ಅವಕಾಶವನ್ನು ಅವರ ಆಯ್ಕೆಗೇ ಸಂಪುಟ ಸಭೆ ಬಿಟ್ಟಿದೆ. ಆದರೆ ಈ ಆಯ್ಕೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನ್ವಯಿಸುವುದೇ ಹೊರತು, ಪದವಿ ವಿದ್ಯಾರ್ಥಿಗಳಿಗೆ ಅಲ್ಲ .
ಅಂದಹಾಗೆ, ತುಮಕೂರು ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು- ರಾಜ್ಯಸರ್ಕಾರದಿಂದ 1 ಕೋಟಿ ರುಪಾಯಿ ಹಾಗೂ ಬೆಂಗಳೂರು ವಿವಿಯಿಂದ 1.17 ಕೋಟಿ ರುಪಾಯಿ ಅನುದಾನ ನೀಡಲಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications