ರೋಷನ್‌ಗಾಗಿ ನಾನು ಬಲಿ- ಸಂಗ್ರಾಂ ; ಅಪರಾಧಿ ನಾನಲ್ಲ - ಖರ್ಗೆ
ರೋಷನ್‌ಗಾಗಿ ನಾನು ಬಲಿ- ಸಂಗ್ರಾಂ ; ಅಪರಾಧಿ ನಾನಲ್ಲ - ಖರ್ಗೆ
ಸಂಗ್ರಾಂಸಿಂಗ್‌ರ ಆರೋಪಗಳನ್ನು ಸಾರಾ ಸಗಟಾಗಿ ನಿರಾಕರಿಸಿದ ಮಾಜಿ ಗೃಹ ಸಚಿವ
ರೋಷನ್‌ಬೇಗ್‌ರನ್ನು ಪ್ರಕರಣದಿಂದ ಬಚಾವ್ ಮಾಡಲು ತಮ್ಮನ್ನು ಬಲಿಪಶುವನ್ನಾಗಿ ಮಾಡಲಾಯಿತು. ಆಗಿನ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹಾಗೂ ಅವರ ಅಳಿಯ ಸಿದ್ಧಾರ್ಥ, ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ.ಶಿವಕುಮಾರ್, ಹಿರಿಯ ಕಾಂಗ್ರೆಸ್ಸಿಗ ಗುಲಾಮ್ ನಬಿ ಆಜಾದ್ ತಮ್ಮ ಮೇಲೆ ಗೂಬೆ ಕೂರಿಸಿದರು ಎಂದು ಸಂಗ್ರಾಂಸಿಂಗ್ ಗುರುವಾರ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ಛಾಪಾ ಪಾಪ ಹಗರಣದಲ್ಲಿ ತೆಲಗಿಯಾಂದಿಗೆ ಸಂಪರ್ಕ ಹೊಂದಿರುವ ಶಂಕೆಯಲ್ಲಿ ಸಂಗ್ರಾಂರನ್ನು ಸಿಬಿಐ ಬಂಧಿಸಿ, ಗುರುವಾರ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರು ಪಡಿಸಿತ್ತು .
ಸಂಗ್ರಾಂಸಿಂಗ್‌ರ ಹೇಳಿಕೆಯ ಬಗ್ಗೆ ಜುಲೈ 9 ರ ಶುಕ್ರವಾರ ಸ್ಪಷ್ಟೀಕರಣ ನೀಡಿದ ಖರ್ಗೆ- ಸಂಗ್ರಾಂಸಿಂಗ್‌ರ ಹೇಳಿಕೆ ಸತ್ಯದೂರವಾಗಿದ್ದು , ನಿವೃತ್ತ ಅಧಿಕಾರಿಯ ಹತಾಶೆಯ ನುಡಿಗಳಾಗಿವೆ ಎಂದಿದ್ದಾರೆ.
ತಾವು ಗೃಹ ಸಚಿವರಾಗಿದ್ದಾರ ಸ್ಟಾಂಪಿಟ್ ತಂಡದ ಶಿಫಾರಸ್ಸಿನಂತೆ ಸಂಗ್ರಾಂ ಸೇರಿ ಮೂವರು ಅಧಿಕಾರಿಗಳನ್ನು ಅಮಾನತ್ತುಗೊಳಿಸಿದ್ದೆ. ಬಹುಶಃ ಇದರಿಂದಾಗಿಯೇ ಸಂಗ್ರಾಂಸಿಂಗ್ ತಮ್ಮ ಮೇಲೆ ಆರೋಪ ಹೊರಿಸಿರಬಹುದು ಎಂದು ಖರ್ಗೆ ವಿಶ್ಲೇಷಿಸಿದರು.
ರಾಜ್ ಬಿಡುಗಡೆಗೆ 20 ಕೋಟಿ : ನರಹಂತಕ ವೀರಪ್ಪನ್ ಸೆರೆಯಿಂದ ವರನಟ ರಾಜ್‌ರನ್ನು ಬಿಡಿಸಲು 20 ಕೋಟಿ ರುಪಾಯಿ ನೀಡಲಾಗಿದೆ. ಈ ಹಣವನ್ನು ನಾನು ಪೊಲೀಸ್ ಅಧಿಕಾರಿಯಾಗಿದ್ದಾಗ, ಚೆನ್ನೈಗೆ ಹೋಗಿ ರಜನಿಕಾಂತ್‌ರ ಮೇನೇಜರ್‌ಗೆ 20 ಕೋಟಿ ರು. ತಲುಪಿಸಿ ಬಂದಿದ್ದೇನೆ ಎಂದೂ ಸಂಗ್ರಾಂಸಿಂಗ್ ಹೇಳಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications