ದ್ರಾವಿಡ್, ಸುಧಾಮೂರ್ತಿ, ಇಕ್ಬಾಲ್, ಶಿವಾಜಿಗೆ ಕೆಂಪೇಗೌಡ ಪ್ರಶಸ್ತಿ
ದ್ರಾವಿಡ್, ಸುಧಾಮೂರ್ತಿ, ಇಕ್ಬಾಲ್, ಶಿವಾಜಿಗೆ ಕೆಂಪೇಗೌಡ ಪ್ರಶಸ್ತಿ
ಜುಲೈ 11ರ ಭಾನುವಾರ ಮುಖ್ಯಮಂತ್ರಿ ಧರ್ಮಸಿಂಗ್‌ರಿಂದ ಪ್ರಶಸ್ತಿ ಪ್ರದಾನ
ಬೆಂಗಳೂರು ಮಹಾನಗರದ ಮೇಯರ್ ಪಿ.ಆರ್.ರಮೇಶ್ 2004 ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಗಳನ್ನು ಗುರುವಾರ (ಜು.8) ಪ್ರಕಟಿಸಿದರು. ಜುಲೈ 11ರಂದು ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಪ್ರಶಸ್ತಿ ಪ್ರದಾನ ಮಾಡುವರು. ಕೆಂಪೇಗೌಡ ಗೋಪುರದ ಬೆಳ್ಳಿ ಸ್ಮರಣಿಕೆ ಹಾಗೂ ಪ್ರಶಂಸಾ ಪತ್ರವನ್ನು ಪ್ರಶಸ್ತಿ ಒಳಗೊಂಡಿದೆ.
ಪರಿಸರವಾದಿ ಅ.ನ.ಯಲ್ಲಪ್ಪರೆಡ್ಡಿ , ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಹಾಗೂ ಲೇಖಕ ಅಗ್ರಹಾರ ಕೃಷ್ಣಮೂರ್ತಿ ಪ್ರಶಸ್ತಿ ಆಯ್ಕೆ ಮಂಡಳಿಯಲ್ಲಿದ್ದರು ಎಂದು ಮೇಯರ್ ರಮೇಶ್ ತಿಳಿಸಿದರು.
ಪ್ರಶಸ್ತಿ ವಿಜೇತರ ಹೆಸರುಗಳು ಕೆಳಗಿನಂತಿವೆ :
ಕ್ರೀಡೆ : ರಾಹುಲ್ ದ್ರಾವಿಡ್, ಸಿ.ಕೆ.ಕೃಷ್ಣ ಜೆಟ್ಟಿ ಹಾಗೂ ಜೆ. ಸವಿತಾ
ಸಮಾಜಸೇವೆ : ಸುಧಾಮೂರ್ತಿ (ಇನ್ಫೋಸಿಸ್ ಪ್ರತಿಷ್ಠಾನ)
ಶಿಕ್ಷಣ : ಪ್ರೊ. ಕೆ.ಇ.ರಾಧಾಕೃಷ್ಣ
ಕಲೆ : ಎನ್. ನರಸಿಂಹಾಚಾರ್
ರಂಗಭೂಮಿ : ಇಕ್ಬಾಲ್ ಅಹಮದ್
ಸಾಹಿತ್ಯ : ಡಾ.ಕೆ. ಮರುಳಸಿದ್ಧಪ್ಪ
ವೈದ್ಯಕೀಯ : ಡಾ. ಬಿ.ರಮೇಶ್
ಪತ್ರಿಕೋದ್ಯಮ : ಶಿವಾಜಿ ಗಣೇಶನ್ (ಪ್ರಜಾವಾಣಿ)
ಪರಿಸರ : ಅಲ್‌ಮಿತ್ರಾ ಪಟೇಲ್
ವಿಜ್ಞಾನ : ಡಾ.ಎಚ್.ಶರತ್‌ಚಂದ್ರ
ಕೈಗಾರಿಕೆ : ವಾಮನಾಚಾರ್
ನಾಗರಿಕ ಸೇವೆ : ಎಂ.ಮಹದೇವ
ನಗೆಕೂಟ : ಬಿ.ಕೆ.ಸತ್ಯನಾರಾಯಣ
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications