ಕೃಷಿ-ಗ್ರಾಮೀಣ ಅಭಿವೃದ್ಧಿಗೆ ಒತ್ತು , ಅಲ್ಪ ಸಂಖ್ಯಾತರ ಮೂಗಿಗೆ ಬೆಣ್ಣೆ !
ಕೃಷಿ-ಗ್ರಾಮೀಣ ಅಭಿವೃದ್ಧಿಗೆ ಒತ್ತು , ಅಲ್ಪ ಸಂಖ್ಯಾತರ ಮೂಗಿಗೆ ಬೆಣ್ಣೆ !
ನೀರಾವರಿ ಯೋಜನೆಗಳ ಪುನರ್ರಚನೆ, ಜಲಮೂಲಗಳ ಪುನರುಜ್ಜೀವನಕ್ಕೆ ಕ್ರಮ
ಬಜೆಟ್‌ನ ಇತರ ಮುಖ್ಯಾಂಶಗಳು :
- ಕುಟುಂಬದ ಓರ್ವ ಸದಸ್ಯನಿಗೆ 100 ದಿನಗಳ ಕೆಲಸದ ಖಾತರಿ ನೀಡುವ ರಾಷ್ಟ್ರೀಯ ಉದ್ಯೋಗ ಖಾತರಿ ಕಾರ್ಯಕ್ರಮಕ್ಕೆ ಚಾಲನೆ.
- ಏಡ್ಸ್ ಮುಂತಾದ ಮಾರಣಾಂತಿಕ ಕಾಯಿಲೆಗಳ ಪತ್ತೆ ಹಚ್ಚುವ ಕಾರ್ಯಕ್ರಮಗಳ ಅನುದಾನ 6 ರಿಂದ 7 ಸಾವಿರ ಕೋಟಿ ರುಪಾಯಿಗೆ ಹೆಚ್ಚಳ.
- ಕೃಷಿ ಅಭಿವೃದ್ಧಿಗೆ ಸರ್ವ ಪ್ರಯತ್ನ . ಮೂರು ವರ್ಷಗಳಲ್ಲಿ ಕೃಷಿ ಬೆಳವಣಿಗೆಯ ದುಪ್ಪಟ್ಟುಗೊಳಿಸಲು ಕ್ರಮ.
- ಆರೋಗ್ಯ ವಿಮೆ ಸಬ್ಸಿಡಿ ಹೆಚ್ಚಿಸಲು ಚಿಂತನೆ. ವೈಯಕ್ತಿಕವಾಗಿ 200 ರೂ, ಐವರು ಸದಸ್ಯರ ಕುಟುಂಬಕ್ಕೆ 300 ರೂ ಹಾಗೂ ಏಳು ಮಂದಿ ಸದಸ್ಯರ ಕುಟುಂಬಕ್ಕೆ 400 ರುಗಳಿಗೆ ಹೆಚ್ಚಿಸಲು ಕ್ರಮ.
- ಅಲ್ಪ ಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು 50 ಕೋಟಿ ರುಪಾಯಿಗಳ ಹೆಚ್ಚುವರಿ ಅನುದಾನ.
- ಕೃಷಿಯಲ್ಲಿನ ಸಹಕಾರಿ ಬ್ಯಾಂಕಿಂಗ್ ಪದ್ಧತಿಯ ಪರಿಶೀಲನೆಗಾಗಿ ಕಾರ್ಯಪಡೆ ರಚನೆ. 2004ರ ಅಕ್ಟೋಬರ್ 31 ರೊಳಗೆ ಕಾರ್ಯಪಡೆಯಿಂದ ವರದಿ.
- ನೀರಾವರಿ ಯೋಜನೆಗಳ ಪುನರ್ರಚನೆ.
- ಗ್ರಾಮೀಣ ಅಭಿವೃದ್ಧಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ 2300 ಕೋಟಿ ರುಪಾಯಿ.
- ಶಿಕ್ಷಣದ ಮೇಲೆ ಶೇ.2 ಸೆಸ್.
- ನೀರಿನ ಕೊರತೆ ಎದುರಿಸಲು- ಎಲ್ಲ ಜಲಮೂಲಗಳ ದುರಸ್ಥಿ , ನವೀಕರಣ, ಪುನರುಜ್ಜೀವನ ಕಾರ್ಯಕ್ರಮಗಳು.
- ಹಿಂದುಳಿದ ಹಾಗೂ ಗುಡ್ಡಗಾಡು ವರ್ಗಗಳಿಗೆ ಸೇರಿದ ಕೃಷಿಕರಿಗಾಗಿ ರಾಷ್ಟ್ರವ್ಯಾಪಿ ಜಲ ಬಿತ್ತನೆ ಯೋಜನೆ.
- ನಬಾರ್ಡ್ ನೆರವಿನಿಂದ 1 ಲಕ್ಷ ನೀರಾವರಿ ಘಟಕಗಳ ಪುನರ್ ಪ್ರಾರಂಭ. ಈ ಯೋಜನೆಗೆ ಶೇ.50ರ ಸಬ್ಸಿಡಿ.
- 2011-12ರೊಳಗೆ 300 ಮಿಲಿಯನ್ ಟನ್ ಆಹಾರಧಾನ್ಯ ಉತ್ಪಾದನೆ ಗುರಿ.
- ಹೊಸ ಆರೋಗ್ಯ ವಿಮೆ ಯೋಜನೆ ಅನುಧಿಷ್ಠಾನ. 120 ರು. ಪ್ರೀಮಿಯಂನ ಈ ಯೋಜನೆ 10 ಸಾವಿರ ರುಪಾಯಿ ಪರಿಹಾರ ಹೊಂದಿದೆ.
- ಏಡ್ಸ್ ತಡೆಗೆ 259 ಕೋಟಿ ರುಪಾಯಿ ಅನುದಾನ.
- ಕೃಷಿ ಅಭಿವೃದ್ಧಿಗೆ ಜೈವಿಕ ತಂತ್ರಜ್ಞಾನ ಬಳಸಲು 100 ಕೋಟಿ ರುಪಾಯಿ ಅನುದಾನ.
ಮುಖಪುಟ / ವಾರ್ತೆಗಳು












Click it and Unblock the Notifications