ಆಂಧ್ರಕ್ಕೂ ಬಾಯಾರಿಕೆ ; ‘ಕೃಷ್ಣೆ ’ಯಿಂದ 20 ಟಿಎಂಸಿ ನೀರಿಗೆ ಕೋರಿಕೆ
ಆಂಧ್ರಕ್ಕೂ ಬಾಯಾರಿಕೆ ; ‘ಕೃಷ್ಣೆ ’ಯಿಂದ 20 ಟಿಎಂಸಿ ನೀರಿಗೆ ಕೋರಿಕೆ
ಕೋರಿಕೆ ಪರಿಶೀಲಿಸುತ್ತೇವೆ - ಆಂಧ್ರ ನಿಯೋಗಕ್ಕೆ ಧರ್ಮಸಿಂಗ್ ಭರವಸೆ
ಆಂಧ್ರಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು , ದಾಹ ತಣಿಸಲಿಕ್ಕಾಗಿ 20 ಟಿಎಂಸಿ ನೀರನ್ನು ಕೃಷ್ಣಾ ನದಿಯಿಂದ ಬಿಡುಗಡೆ ಮಾಡುವಂತೆ ಆಂಧ್ರದ ನಿಯೋಗವೊಂದು ಮುಖ್ಯಮಂತ್ರಿ ಎನ್.ಧರ್ಮಸಿಂಗ್‌ರನ್ನು ಬುಧವಾರ (ಜು.7) ಭೇಟಿ ಮಾಡಿ ಒತ್ತಾಯಿಸಿತು.
ಧರ್ಮಸಿಂಗ್ ಜೊತೆಗಿನ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಂಧ್ರಪ್ರದೇಶದ ನೀರಾವರಿ ಸಚಿವ ಪಿ.ಲಕ್ಷ್ಮಯ್ಯ- ನೀರು ಬಿಡುವ ಕೋರಿಕೆಯ ಕುರಿತು ಶೀಘ್ರದಲ್ಲೇ ನಿರ್ಣಯ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಧರ್ಮಸಿಂಗ್ ತಮಗೆ ತಿಳಿಸಿರುವುದಾಗಿ ಹೇಳಿದರು.
ನೀರು ಬಿಡುಗಡೆ ಸಂಬಂಧ ಧರ್ಮಸಿಂಗ್ ಅವರೊಂದಿಗೆ ಆಂಧ್ರದ ಮುಖ್ಯಮಂತ್ರಿ ವೈ.ರಾಜಶೇಖರ ರೆಡ್ಡಿ ದೂರವಾಣಿ ಸಂಭಾಷಣೆಯನ್ನು ಈಗಾಗಲೇ ನಡೆಸಿದ್ದಾರೆ. ಆಂಧ್ರ ಕರಾವಳಿಯ ಜನತೆ ನೀರಿನ ಕೊರತೆ ಎದುರಿಸುತ್ತಿರುವುದನ್ನು ಧರ್ಮಸಿಂಗ್‌ರಿಗೆ ರಾಜಶೇಖರ ರೆಡ್ಡಿ ವಿವರಿಸಿದ್ದಾರೆ ಎಂದು ಲಕ್ಷ್ಮಯ್ಯ ಹೇಳಿದರು. ಬುಧವಾರದ ಭೇಟಿಯ ಸಂದರ್ಭದಲ್ಲಿ ವೈಎಸ್‌ಆರ್ ಅವರ ಪತ್ರವನ್ನು ಧರ್ಮಸಿಂಗ್‌ರಿಗೆ ತಲುಪಿಸಿರುವುದಾಗಿ ಅವರು ಹೇಳಿದರು.
ಪ್ರಸ್ತುತ ಆಲಮಟ್ಟಿ ಜಲಾಶಯದಲ್ಲಿ ತೃಪ್ತಿಕರ ನೀರಿನ ಸಂಗ್ರಹವಿದೆ. ಆ ಕಾರಣದಿಂದಾಗಿ ಆಂಧ್ರದ ಕೋರಿಕೆಗೆ ಕರ್ನಾಟಕ ಧನಾತ್ಮಕವಾಗಿ ಸ್ಪಂದಿಸಲಿದೆ ಎಂದು ಲಕ್ಷ್ಮಯ್ಯ ಆಶಾಭಾವನೆ ವ್ಯಕ್ತಪಡಿಸಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications