ಹೈಕೋರ್ಟ್ ಪೀಠ : ಹೋರಾಟ ಸಮಿತಿಯಿಂದ ಜುಲೈ 15ರ ಗಡುವು
ಹೈಕೋರ್ಟ್ ಪೀಠ : ಹೋರಾಟ ಸಮಿತಿಯಿಂದ ಜುಲೈ 15ರ ಗಡುವು
ಪೀಠ ಸ್ಥಾಪನೆಗೆ 150 ಕೋಟಿ ರುಪಾಯಿ ನಿಧಿ ಮೀಸಲಿಡಲು ಆಗ್ರಹ
ಜುಲೈ 6ರ ಮಂಗಳವಾರ ನಡೆದ ಹೈಕೋರ್ಟ್ ಪೀಠ ಹೋರಾಟ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಹೈಕೋರ್ಟ್ ಪೀಠ ಸ್ಥಾಪನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಗಾಗಿ ಸರಕಾರ 150 ಕೋಟಿ ರೂಪಾಯಿ ನಿಧಿ ನಿಗದಿಪಡಿಸಬೇಕು ಹಾಗೂ ಕೂಡಲೇ ಮಖ್ಯನ್ಯಾಯಮೂರ್ತಿಗಳನ್ನು ಭೇಟಿಯಾಗಿ ಪೀಠ ಸ್ಥಾಪನೆಯ ಕುರಿತು ಚರ್ಚಿಸಬೇಕು ಎಂದು ಸಭೆ ಆಗ್ರಹಿಸಿದೆ.
ಹೈಕೋರ್ಟ್ ಪೀಠ ಹೋರಾಟ ಸಮಿತಿ ಅಧ್ಯಕ್ಷ ಬಿ.ಡಿ.ಹೀರೇಮಠ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ - ಶಾಸಕರಾದ ಬಸವರಾಜ ಹೊರಟ್ಟಿ , ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಮುಂತಾದವರು ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications