ಅಂಬರೀಶ್ ಅಭಿಮಾನಿಗಳ ಸಂಘದಿಂದ ದೇಜಗೌ 87ನೇ ಹುಟ್ಟುಹಬ್ಬ
ಅಂಬರೀಶ್ ಅಭಿಮಾನಿಗಳ ಸಂಘದಿಂದ ದೇಜಗೌ 87ನೇ ಹುಟ್ಟುಹಬ್ಬ
ನೂರಾರು ಅಭಿಮಾನಿಗಳಿಂದ ಹಿರಿಯ ಲೇಖಕನಿಗೆ ಜನ್ಮದಿನದ ಶುಭಾಶಯ
ದೇಜಗೌ 87ನೇ ವಸಂತಕ್ಕೆ ಕಾಲಿಟ್ಟ ಈ ಸಂದರ್ಭದಲ್ಲಿ ಹಲವಾರು ಸಾಹಿತಿಗಳು, ಅಭಿಮಾನಿಗಳು, ಬಂಧುಮಿತ್ರರು ಮತ್ತು ಅವರ ಬೃಹತ್ ಶಿಷ್ಯಸಂಕುಲ ಅಭಿಮಾನದ ಹಿರಿಯನಿಗೆ ಶುಭಕೋರಲು ಆಗಮಿಸಿತ್ತು.
ಬನ್ನೂರು ಕೆ.ರಾಜು ನೇತೃತ್ವದ ಅಖಿಲ ಭಾರತ ಅಂಬರೀಶ್ ಅಭಿಮಾನಿಗಳ ಸಂಘ ದೇಜಗೌ ಜನ್ಮದಿನದ ಸಿದ್ಧತೆ ಮಾಡಿತ್ತು. ಬರಹಗಾರರು ಹಾಗೂ ಅಭಿಮಾನಿಗಳ ಸ್ನೇಹ ಸಮ್ಮಿಲನದ ಈ ಕಾರ್ಯಕ್ರಮ ದೇಜಗೌ ಮುಖದಲ್ಲಿ ಮುಗುಳ್ನಗೆ ಮೂಡಿಸಿತ್ತು .
ದೇಜಗೌಗೆ ಶುಭ ಕೋರಿದವರಲ್ಲಿ - ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್, ಪ್ರೊ. ಕೆ. ಭೈರವಮೂರ್ತಿ, ಡಾ. ಜಗದೀಶ್ ಮತ್ತು ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಪ್ರಮುಖರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications