ಲಾಲು ರೈಲಲ್ಲಿ ತಮಿಳ್ನಾಡಿಗೆ ಪ್ರಥಮ ದರ್ಜೆ, ರಾಜ್ಯಕ್ಕೆತೃತೀಯ ದರ್ಜೆ
ಲಾಲು ರೈಲಲ್ಲಿ ತಮಿಳ್ನಾಡಿಗೆ ಪ್ರಥಮ ದರ್ಜೆ, ರಾಜ್ಯಕ್ಕೆತೃತೀಯ ದರ್ಜೆ
ಸಂದರ್ಶನಕ್ಕೆ ತೆರಳುವ ನಿರುದ್ಯೋಗಿ ಯುವಜನತೆಗೆ ಉಚಿತ ಪ್ರಯಾಣ ಯೋಗ
ಹಾಸನ-ಬೆಂಗಳೂರು ನಡುವಣ ರೈಲ್ವೆ ಮಾರ್ಗ ನಿರ್ಮಿಸುವ ಪ್ರಸ್ತಾವನೆಯನ್ನು ಹೊರತುಪಡಿಸಿದರೆ ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳೂ ಲಾಲೂ ಬಜೆಟ್‌ನಲ್ಲಿಲ್ಲ . ಬೆಂಗಳೂರುನಗರ- ಬಂಗಾರಪೇಟೆ, ಮೈಸೂರು-ಧಾರವಾಡ ಹಾಗೂ ಹುಬ್ಬಳ್ಳಿ-ಚೆನ್ನೈ ನಡುವೆ ಮೂರು ರೈಲುಗಳನ್ನು ಪ್ರಕಟಿಸಿರುವ ಲಾಲೂ ರಾಜ್ಯದ ಕಣ್ಣೊರೆಸುವ ಪ್ರಯತ್ನ ಮಾಡಿದ್ದಾರೆ.
ಉಳಿದಂತೆ- ರೈಲ್ವೆ ಪ್ರಯಾಣದರವನ್ನು ಹೆಚ್ಚಿಸದಿರುವುದು ಮಾತ್ರವಲ್ಲ , ಕೆಲವು ವರ್ಗಗಳಿಗೆ ಪ್ರಯಾಣದರದಲ್ಲಿ ವಿಶೇಷ ರಿಯಾತಿಯನ್ನು ನೀಡಲೂ ಲಾಲೂಪ್ರಸಾದ್ ಯಾದವ್ ನಿರ್ಧರಿಸಿದ್ದಾರೆ. ವಿಶೇಷ ರಿಯಾಯಿತಿ ಕೆಳಕಂಡವರಿಗೆ ಲಭ್ಯ :
- ಉಗ್ರರೊಂದಿಗಿನ ಹೋರಾಟ ಅಥವಾ ಯುದ್ಧಗಳಲ್ಲಿ ನಿಧನರಾದ ಯೋಧರ ಪತ್ನಿಯರಿಗೆ ರೈಲು ಪ್ರಯಾಣಶುಲ್ಕದಲ್ಲಿ ಶೇ.75 ರಿಯಾಯಿತಿ.
- ಹಿಮೋಫೀಲಿಯಾ ಚಿಕಿತ್ಸೆಗೆ ತೆರಳುವ ರೋಗಿಗಳಿಗೆ ಶೇ.75 ಶುಲ್ಕ ವಿನಾಯಿತಿ.
- ನಿರುದ್ಯೋಗಿಗಳಿಗೆ ಉಚಿತ ಪ್ರಯಾಣ : ಸಂದರ್ಶನಗಳಿಗೆ ತೆರಳುವ ಹಾಗೂ ವಿವಿಧ ಅರ್ಹತಾ ಪರೀಕ್ಷೆಗಳನ್ನು ಬರೆಯಲು ತೆರಳುವ ನಿರುದ್ಯೋಗಿ ಯುವಜನತೆಗೆ ಉಚಿತ ಪ್ರಯಾಣ ಸವಲತ್ತು .
- ಪ್ರಯಾಣ ಶುಲ್ಕ ಹೆಚ್ಚಳ ಇಲ್ಲ .
- 15 ಎಕ್ಸ್‌ಪ್ರೆಸ್ ರೈಲುಗಳ ಸಂಚಾರ.
- ಕಂಪ್ಯೂಟರೀಕೃತ ಸಂಚಾರ ನಿಯಂತ್ರಣ.
- 273 ಕಿಮೀ ಉದ್ದದ ನೂತನ ರೈಲು ಮಾರ್ಗ ನಿರ್ಮಾಣದ ಪ್ರಸ್ತಾವನೆ.
- ದುರಂತ ನಿರ್ವಹಣೆಗಾಗಿ ಸಂಸ್ಥೆಯಾಂದರ ಸ್ಥಾಪನೆ.
- 32 ಹೊಸ ರೈಲುಗಳ ಓಡಾಟ.
- ಪರಿಸರ ಸ್ನೇಹಿ ಶೌಚಾಲಯಗಳ ವ್ಯವಸ್ಥೆ .
- ರೈಲುಗಳಲ್ಲಿ ಲಸ್ಸಿ ಮಾರಾಟಕ್ಕೆ ಕ್ರಮ. ರೈಲು ನಿಲ್ದಾಣಗಳಲ್ಲಿ ಹಾಲು ಹಾಗೂ ಹಾಲು ಉತ್ಪನ್ನಗಳಿಗೆ ಮಣೆ.
- ಪ್ರಯಾಣಿಕರ ರಕ್ಷಣೆಗೆ ಆದ್ಯತೆ.
ವಾರ್ತಾ ಸಂಚಯ
ರೈಲ್ವೆ ಬಜೆಟ್ 2004-05: ರಕ್ಷಣೆಗೆ ಒತ್ತು , ಪ್ರಯಾಣದರ ಯಥಾಸ್ಥಿತಿ
ಮುಖಪುಟ / ವಾರ್ತೆಗಳು












Click it and Unblock the Notifications