ರೈಲ್ವೆ ಬಜೆಟ್ 2004-05: ರಕ್ಷಣೆಗೆ ಒತ್ತು , ಪ್ರಯಾಣದರ ಯಥಾಸ್ಥಿತಿ
ರೈಲ್ವೆ ಬಜೆಟ್ 2004-05: ರಕ್ಷಣೆಗೆ ಒತ್ತು , ಪ್ರಯಾಣದರ ಯಥಾಸ್ಥಿತಿ
ಬೆಂಗಳೂರು-ಹಾಸನ ನಡುವೆ ನೂತನ ರೈಲು ಮಾರ್ಗ, ಪ್ರತಿಪಕ್ಷಗಳಿಂದ ರೈಲ್ವೆ ಬಜೆಟ್ ಮಂಡನೆಯ ಸದನಕ್ಕೆ ಬಹಿಷ್ಕಾರ
ಕೇಂದ್ರ ರೈಲ್ವೆ ಸಚಿವ ಲಾಲೂಪ್ರಸಾದ್ ಯಾದವ್ ಜುಲೈ 6, ಮಂಗಳವಾರ ಬೆಳಗ್ಗೆ ಲೋಕಸಭೆಯಲ್ಲಿ 2004-05ರ ರೈಲ್ವೆ ಬಜೆಟ್ ಮಂಡಿಸಿದರು.
ಲಾಲೂ ರೈಲು ಬಜೆಟ್ ಮಂಡಿಸುವ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಪ್ರತಿಪಕ್ಷಗಳು ಸದನವನ್ನು ಬಹಿಷ್ಕರಿಸಿವೆ. ಕಳಂಕಿತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವ ಪ್ರಧಾನಿ ಮನಮೋಹನ್‌ಸಿಂಗ್‌ರ ನಿರ್ಧಾರವನ್ನು ವಿರೋಧಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಬಹಿಷ್ಕಾರ ಬಜೆಟ್‌ಗೆ ಮಾತ್ರ ಸೀಮಿತವಾಗಿದೆ ಎಂದು ಬಜೆಟ್ ಮಂಡನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅಡ್ವಾಣಿ ಹೇಳಿದರು.
ಹಾಸನ-ಬೆಂಗಳೂರು ಮಾರ್ಗ : ಹಾಸನ ಹಾಗೂ ಬೆಂಗಳೂರು ನಡುವೆ ನೂತನ ರೈಲ್ವೆ ಮಾರ್ಗ ನಿರ್ಮಾಣ ಸೇರಿದಂತೆ 273 ಕಿಮೀಗಳ ನೂತನ ರೈಲ್ವೆ ಹಳಿ ನಿರ್ಮಿಸಲು ಭಾರತೀಯ ರೈಲ್ವೆ ಉದ್ದೇಶಿಸಿದೆ. ಹೊಸದಾಗಿ ರೈಲು ಮಾರ್ಗ ನಿರ್ಮಿಸಲು ಉದ್ದೇಶಿಸಿರುವ ಸ್ಥಳಗಳು : ಹಾಸನ-ಬೆಂಗಳೂರು, ಚಂಡೀಗಢ-ಮೊರಿಂಡ-ಲೂಧಿಯಾನ ಹಾಗೂ ಕಾಕಿನಾಡ-ಕೊಟಿಪಲ್ಲಿ .
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications