ಹೇಳುವುದು ಒಂದು ದೇವೇಗೌಡ ಮಾಡುವುದು ಇನ್ನೊಂದು -ಬಿಜೆಪಿ
ಹೇಳುವುದು ಒಂದು ದೇವೇಗೌಡ ಮಾಡುವುದು ಇನ್ನೊಂದು -ಬಿಜೆಪಿ
ಅರಸೀಕೆರೆಯಲ್ಲಿ ಬಿಜೆಪಿ ಧುರೀಣ ಯಡಿಯೂರಪ್ಪನವರಿಗೆ ಸನ್ಮಾನ
ಮೊಟ್ಟ ಮೊದಲ ಬಾರಿಗೆ ಬಿಜೆಪಿ ಕೃಪೆಯಿಂದ ಸಚಿವರಾದ ವಿಷಯವನ್ನು ದೇವೇಗೌಡ ಇದೀಗ ಮರೆತುಬಿಟ್ಟಿದ್ದಾರೆ. 1983ರಲ್ಲಿ ರಾಮಕೃಷ್ಣಹೆಗಡೆ ಸರ್ಕಾರದಲ್ಲಿ ದೇವೇಗೌಡ ಸಚಿವರಾಗಿದ್ದರು. ಆ ಸರ್ಕಾರ ಅಸ್ತಿತ್ವದಲ್ಲಿದ್ದುದೇ ಬಿಜೆಪಿ ಬೆಂಬಲದಿಂದ ಎಂದು ಯಡಿಯೂರಪ್ಪ ಹೇಳಿದರು. ಅರಸೀಕೆರೆಯ ಬಿಜೆಪಿ ಘಟಕದ ಸನ್ಮಾನವನ್ನು ಸ್ವೀಕರಿಸಿದ ನಂತರ (ಜು.4) ಯಡಿಯೂರಪ್ಪ ಮಾತನಾಡುತ್ತಿದ್ದರು.
ಹಳೆಯ ಘಟನೆಗಳನ್ನು ಮರೆತಿರುವ ದೇವೇಗೌಡ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಜೊತೆ ಸಖ್ಯ ಬೆಳೆಸಿದ್ದಾರೆ. ಇದೇ ದೇವೇಗೌಡ ಚುನಾವಣೆಗೆ ಮುನ್ನ ಕಾಂಗ್ರೆಸ್‌ನ್ನು ಕಿತ್ತೊಗೆಯುವುದಾಗಿ ಹೇಳುತ್ತಿದ್ದರು ಎಂದು ಯಡಿಯೂರಪ್ಪ ಲೇವಡಿ ಮಾಡಿದರು.
ಸಮ್ಮಿಶ್ರ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಸಾಧ್ಯವಿಲ್ಲ ಎಂದ ಯಡಿಯೂರಪ್ಪ - ಸಂಪುಟದಲ್ಲಿನ ಪ್ರಮುಖ ಸ್ಥಾನಗಳಿಗಾಗಿ ನಡೆಯುತ್ತಿರುವ ಕಿತ್ತಾಟವೇ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications