ಶಿಕಾರಿಪುರ ಹರಿಹರೇಶ್ವರ ಅವರ ತಾಯಿ ಅನ್ನಪೂರ್ಣಮ್ಮ ವಿಧಿವಶ
ಶಿಕಾರಿಪುರ ಹರಿಹರೇಶ್ವರ ಅವರ ತಾಯಿ ಅನ್ನಪೂರ್ಣಮ್ಮ ವಿಧಿವಶ
ಬೆಂಗಳೂರು : ಖ್ಯಾತ ಲೇಖಕ, ಪತ್ರಕರ್ತ ಮತ್ತು ದಟ್ಸ್‌ಕನ್ನಡ.ಕಾಂನ ಅಂಕಣಕಾರ ಶಿಕಾರಿಪುರ ಹರಿಹರೇಶ್ವರ ಅವರ ತಾಯಿ ಅನ್ನಪೂರ್ಣಮ್ಮ ಕೃಷ್ಣಸ್ವಾಮಿ ಅವರು ಬೆಂಗಳೂರಿನಲ್ಲಿ ಮಂಗಳವಾರ ದೈವಾಧೀನರಾದರು.ಅನ್ನಪೂರ್ಣಮ್ಮ ಅವರು ಹರಿಯವರನ್ನೂ ಸೇರಿದಂತೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯವರನ್ನು ಅಗಲಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಬಹುಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹಿರಿಯ ಮಗ ಸೀತಾರಾಂ ಅವರ ಮನೆಯಲ್ಲಿ ಕೊನೆಯುಸಿರೆಳೆದರು. ಅನ್ನಪೂರ್ಣಮ್ಮನವರ ಅನಾರೋಗ್ಯವೂ ಹರಿಯವರು ಅಮೆರಿಕದಿಂದ ಭಾರತಕ್ಕೆ ಮರಳಲು ಒಂದು ಕಾರಣವಾಗಿತ್ತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications