ಹೊನ್ನಾಳಿ :ಲೋಕಾಯುಕ್ತ ಸಮ್ಮುಖದಿ ನಾಗರಿಕರ ಚಚ್ಚಿದ ಪೊಲೀಸರು
ಹೊನ್ನಾಳಿ :ಲೋಕಾಯುಕ್ತ ಸಮ್ಮುಖದಿ ನಾಗರಿಕರ ಚಚ್ಚಿದ ಪೊಲೀಸರು
ಇಬ್ಬರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಲೋಕಾಯುಕ್ತ ರ ಎದುರಿನಲ್ಲಿ ಆರೋಪಿ ವೈದ್ಯಕೀಯ ಅಧಿಕಾರಿಗಳ ಪರ ವಿರೋಧ ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ವೈದ್ಯ ಅಧಿಕಾರಿಗಳ ಬೆಂಬಲಕ್ಕೆ ಕೆಲವರು ನಿಂತರೆ, ಹೆಚ್ಚಿನ ಸಂಖ್ಯೆಯ ನಾಗರಿಕರು ಅಧಿಕಾರಿಗಳ ವಿರುದ್ಧ ಹರಿಹಾಯತೊಡಗಿದರು. ಈ ವಾಗ್ವಾದ ತಾರಕಕ್ಕೇರಿದ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಈ ಪ್ರಹಾರದಲ್ಲಿ ಅನೇಕ ಮಂದಿ ಗಾಯಗೊಂಡಿದ್ದು , ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಗಾಯಗೊಂಡವರನ್ನು ಹೊನ್ನಾಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಲಾಠಿ ಚಾರ್ಜ್ ಬಗೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು , ಉಪ ಪೊಲೀಸ್ ಅಧೀಕ್ಷಕ ಬಸವರಾಜಪ್ಪನವನ್ನು ಘರಾವ್ ಮಾಡಿದರು. ಲಾಠಿ ಚಾರ್ಜ್‌ಗೆ ಕಾರಣ ತಿಳಿ ಸಬೇಕೆಂದು ಒತ್ತಾಯಿಸಿದ ನಾಗರಿಕರು, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications