ಬೆಂಗಳೂರಿನಲ್ಲಿ ಜುಲೈ5ರಿಂದ ಐದು ದಿನ ಯಕ್ಷಗಾನ ‘ಪಂಚಕ’ ಉತ್ಸವ
ಬೆಂಗಳೂರಿನಲ್ಲಿ ಜುಲೈ5ರಿಂದ ಐದು ದಿನ ಯಕ್ಷಗಾನ ‘ಪಂಚಕ’ ಉತ್ಸವ
ನಗರದ ಯಕ್ಷಗಾನ ರಸಿಕರಿಗೆ ಸಂತಸದ ಸುದ್ದಿ. ಐದು ದಿನಗಳ ಯಕ್ಷಗಾನ ‘ಪಂಚಕ’. ಉಚಿತ ಪ್ರವೇಶ. ನೀವೂ ಬನ್ನಿ... ನಿಮ್ಮವರನ್ನೂ ಕರೆತನ್ನಿ...
- ಪ್ರಕಾಶ ಸಾಗರ
[email protected]
ಯಕ್ಷಗಾನ ಯೋಗಕ್ಷೇಮ ಅಭಿಯಾನ, ಬೆಂಗಳೂರು ಮತ್ತು ಹವ್ಯಕ ಮಹಾಸಭೆ, ಬೆಂಗಳೂರು ಪ್ರಾಂತ ಪ್ರತಿನಿಧಿ ಪರಿಷತ್‌ಗಳ ಸಹಯೋಗದಲ್ಲಿ ನಡೆಯಲಿರುವ ಐದು ದಿನಗಳ ‘ಪಂಚಕ’ ಯಕ್ಷೋತ್ಸವಕ್ಕೆ ಅಭಿಯಾನವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದೆ. ಯಕ್ಷಗಾನ ಕಲಾವಿದರ, ಯಕ್ಷಗಾನ ರಸಿಕರ, ಯಕ್ಷಗಾನ ಆರಾಧಕರ ಮಿಲನ ಮಹೋತ್ಸವವೆಂದು ಪರಿಗಣಿಸಲಾಗುವ ಈ ಕಾರ್ಯಕ್ರಮಕ್ಕೆ, ಸಂಘಟಕರು ಸರ್ವರಿಗೂ ಆದರದ ಆಮಂತ್ರಣ ನೀಡುತಿದ್ದಾರೆ.
ನಡೆಯಲಿರುವ ಪ್ರಸಂಗಗಳು:
ಕಾರ್ತವೀರ್ಯಾರ್ಜುನ
ಭಕ್ತ ಸುಧನ್ವ
ದಕ್ಷ ಯಜ್ಞ
ಕೀಚಕ ವಧೆ
ಶಾಕುಂತಲೆ
ಕಲಾವಿದರು:
ಹಿಮ್ಮೇಳದಲ್ಲಿ: ವಿದ್ವಾನ್ ಗಣಪತಿ ಭಟ್ಟ, ಪ್ರಸನ್ನ ಭಟ್ಟ ಬಾಳ್ಕಲ್, ವಿ.ಪಿ.ಪಾಠಕ್, ವೇದವ್ಯಾಸ ಶೆಣೈ, ಲಕ್ಷ್ಮೀನಾರಾಯಣ ಸಂಪ
ಮುಮ್ಮೇಳದಲ್ಲಿ: ರಾಮಚಂದ್ರ ಹೆಗಡೆ ಕೊಂಡದಕುಳಿ, ಗಣಪತಿ ಹೆಗಡೆ ತೋಏಮನೆ, ಸಂಜಯ ಬೆಳೆಯೂರು, ನಾಗೇಂದ್ರ ಮೂರೂರು, ಪರಮೇಶ್ವರ್ ಭಟ್ಟ ಹೇರೂರು.
ಸ್ತ್ರೀ ವೇಶ: ವಿಷ್ಣು ಭಟ್ಟ ಮೂರೂರು, ಶಂಕರ ಹೆಗಡೆ ನೀಲ್ಕೋಡು, ಮಂಟಪ ಪ್ರಬಾಕರ ಉಪಾಧ್ಯ(ವಿಶೇಷ ಆಮಂತ್ರಿತರು)
ಹಾಸ್ಯ: ಶ್ರೀಧರ ಹೆಗಡೆ ಚಪ್ಪರಮನೆ.
ಐದು ದಿನಗಳ ಈ ಕಾರ್ಯಕ್ರಮದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದ ಯಶಸ್ವಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣರಾಗಬೇಕೆಂದು ಅಭಿಯಾನವು ವಿನಂತಿಸುತ್ತದೆ. ಉಚಿತ ಪ್ರವೇಶವಾಗಿದ್ದು, ದಾನಿಗಳು, ಆಸಕ್ತರು ತನು, ಮನ, ಧನದಿಂದ ನೀಡುವ ಸಹಕಾರಗಳಿಗೆ ಸ್ವಾಗತವಿದೆ.
ಹೆಚ್ಚಿನ ವಿವರಗಳಿಗಾಗಿ:
ಅಖಿಲ ಹವ್ಯಕ ಮಹಾ ಸಭಾ
101, 8ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ
ಮಲ್ಲೇಶ್ವರಂ, ಬೆಂಗಳೂರು-03
ದೂರವಾಣಿ: 080-23348193, 51128498, 26721510/94480-61678












Click it and Unblock the Notifications