ಕಸಾಪ ಗೌರವ ಕಾರ್ಯದರ್ಶಿ ಹುದ್ದೆಯಿಂದ ಜಿ. ಶಂಕರಯ್ಯ ಬಿಡುಗಡೆ
ಕಸಾಪ ಗೌರವ ಕಾರ್ಯದರ್ಶಿ ಹುದ್ದೆಯಿಂದ ಜಿ. ಶಂಕರಯ್ಯ ಬಿಡುಗಡೆ
ಪರಿಷತ್ತಿನ ಅಧ್ಯಕ್ಷ ಮತ್ತು ಕಾಯದರ್ಶಿಯ ನಡುವೆ ಆಂತರಿಕ ವೈಮನಸ್ಯ
ಶಂಕರಯ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿರುವುದು ಅವರ ಬೆಂಬಲಿಗರಿಂದ ತಿಳಿದು ಬಂದಿದೆ. ಗೌರವ ಕಾರ್ಯದರ್ಶಿ ಸ್ಥಾನದಲ್ಲಿ ಇದ್ದುಕೊಂಡು ಚುನಾವಣೆ ಪ್ರಚಾರ ನಡೆಸುವುದು ನಿಯಮ ಬಾಹಿರ. ಆ ಕಾರಣದಿಂದ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ಆದೇಶ ಹೊರಡಿಸಿದ್ದಾರೆ.
ಅಧ್ಯಕ್ಷರ ಅಧಿಕಾರ ಅವಧಿ ಇನ್ನು ಕೇವಲ ಹತ್ತು ದಿನಗಳು ಮಾತ್ರ ಬಾಕಿ ಇರುವಾಗ ಈ ಆದೇಶ ಹೊರಡಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಅಧ್ಯಕ್ಷ ಪುನರೂರು ಅವರ ಅಧಿಕಾರ ಅವಧಿ ವಿಸ್ತರಿಸುವ ನಿರ್ಣಯಕ್ಕೆ ಶಂಕರಯ್ಯ ತೀರ್ವ ವಿರೋಧ ಒಡ್ಡಿದ್ದರು. ಇದು ಅವರ ನಡುವಿನ ವೈಮನಸ್ಯಕ್ಕೆ ಕಾರಣವಾಗಿತ್ತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications