ನಾನಿರುವುದೆ ನಿಮಗಾಗಿ: ತವರು ಜಿಲ್ಲೆಯಲ್ಲಿ ಧರ್ಮಸಿಂಗ್‌ಮಿಂಚಿಂಗು

ನಾನಿರುವುದೆ ನಿಮಗಾಗಿ: ತವರು ಜಿಲ್ಲೆಯಲ್ಲಿ ಧರ್ಮಸಿಂಗ್‌ಮಿಂಚಿಂಗು
ಅಸಮತೋಲನ ಅಳಿಸುವೆ, ಸಮಸ್ಯೆಗಳ ನೀಗಿಸುವೆ, ನನ್ನ ನಂಬಿ........

ಗುಲ್ಬರ್ಗಾ : ಪ್ರಾದೇಶಿಕ ಅಸಮತೋಲನವನ್ನು ತೊಡೆದುಹಾಕಲು ತಮ್ಮ ಸರ್ಕಾರ ಕಟಿಬದ್ಧವಾಗಿದೆ. ಅದೇರೀತಿ, ಹೈದ್ರಾಬಾದ್‌ ಕರ್ನಾಟಕ ಪ್ರದೇಶದ ಜನತೆಯ ಸಮಸ್ಯೆಗಳ ಪರಿಹರಿಸುವಲ್ಲಿಯೂ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಘೋಷಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ತವರು ಗುಲ್ಬರ್ಗಾ ಜಿಲ್ಲೆಗೆ ಆಗಮಿಸಿದ ಧರ್ಮಸಿಂಗ್‌, ಸೇಡಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ತವರು ಜನತೆ ಮುಖ್ಯಮಂತ್ರಿ ಧರ್ಮಸಿಂಗ್‌ ಹಾಗೂ ಜಲ ಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಭ್ರಮದಿಂದ ಸ್ವಾಗತಿಸಿತು.

ಪ್ರಾದೇಶಿಕ ಅಸಮಾನತೆಯನ್ನು ತೊಡೆದುಹಾಕುವ ಉದ್ದೇಶದಿಂದ 371ನೇ ಕಲಂ ಕಕ್ಷೆಗೆ ರಾಜ್ಯವನ್ನು ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲೂ ಈ ವಿಷಯವನ್ನು ಸೇರಿಸಲಾಗುವುದು ಎಂದು ಧರ್ಮಸಿಂಗ್‌ ಹೇಳಿದರು.

ಈ ಪ್ರದೇಶದ ಅಭಿವೃದ್ಧಿಗೆ ತಾವು ಹಾಗೂ ಮಲ್ಲಿಕಾರ್ಜುನ ಖರ್ಗೆ ಕಳೆದ 33 ವರ್ಷಗಳಿಂದ ದುಡಿಯುತ್ತಲೇ ಇದ್ದೇವೆ. ಜನತೆಯ ಸಂಕಷ್ಟಗಳನ್ನು ಪರಿಹರಿಸುವಲ್ಲಿ ಅನೇತ ತೊಡರುಗಳನ್ನು ಎದುರಿಸಿದ್ದೇವೆ. ಎಲ್ಲ ಅಡೆತಡೆಗಳನ್ನು ದಾಟಿ ಗುರಿ ತಲುಪುವ ವಿಶ್ವಾಸ ನಮಗಿದೆ ಎಂದು ಮುಖ್ಯಮಂತ್ರಿ ಧರ್ಮಸಿಂಗ್‌ ಹೇಳಿದರು.

ಸಭೆಯಲ್ಲಿ ಮಾತನಾಡಿದ ಜಲ ಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ ಸಮ್ಮಿಶ್ರ ಸರ್ಕಾರದ ಅನಿವಾರ್ಯತೆಯನ್ನು ಜನರ ಮುಂದಿಟ್ಟರು. ಕೋಮುಶಕ್ತಿಗಳನ್ನು ಮಟ್ಟ ಹಾಕುವ ಉದ್ದೇಶದಿಂದ ಜಾತ್ಯತೀತ ಜನತಾದಳದೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಬೇಕಾಯಿತು ಎಂದ ಖರ್ಗೆ, ಧರ್ಮ ಹಾಗೂ ಭಾಷೆಯ ಹೆಸರಿನಲ್ಲಿ ಬಿಜೆಪಿ ದೇಶವನ್ನು ವಿಭಜಿಸುತ್ತಿದೆ ಎಂದು ಆಪಾದಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+