ಉಡುಪಿ ಜಿಲ್ಲಾ ಪೊಲೀಸರಿಗೆ ಮಾಯಾಮೃಗವಾದ ನಕ್ಸಲೈಟ್‌ ತಂಡ

ಉಡುಪಿ ಜಿಲ್ಲಾ ಪೊಲೀಸರಿಗೆ ಮಾಯಾಮೃಗವಾದ ನಕ್ಸಲೈಟ್‌ ತಂಡ
ನಿಖರ ಸುಳಿವಿನ ಆಧಾರದ ಮೇಲೆ ದಾಳಿ ನಡೆಸಿದ ಎಸ್‌.ಪಿ. ಅಶೋಕನ್‌ ನೇತ್ರತ್ವದ ಪೊಲೀಸ್‌ ಪಡೆ

ಮಣಿಪಾಲ: ಉಡುಪಿ ಜಿಲ್ಲೆಯ ಕುಂದಾಪುರ ಗ್ರಾಮದಲ್ಲಿ ಜುಲೈ 2ರಂದು 6 ಜನ ನಕ್ಸಲೈಟ್‌ಗಳ ಗುಂಪೊಂದು ಕಾಣಿಸಿಕೊಂಡಿದ್ದಾರೆಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಈ ನಕ್ಸಲೈಟ್‌ ಕಾರ್ಯಕರ್ತರ ಗುಂಪು ಜೂನ್‌ 1ರ ರಾತ್ರಿ ಕುಂದಾಪುರದ ಹಳ್ಳಿ ಹೊಳೆ ಗ್ರಾಮದ ಸಮೀಪ ಬೀಡು ಬಿಟ್ಟಿತು. ಈ ಸುಳಿವು ದೊರೆತ ತಕ್ಷಣ ಎಸ್‌.ಪಿ. ಅಶೋಕನ್‌ ಅವರ ನೇತ್ರತ್ವದ 15 ಮಂದಿಯ ಪೊಲೀಸ್‌ ಪಡೆ ಕಾರ್ಯನಿರತಗೊಂಡು ಅವರಿದ್ದ ಸ್ಥಳಕ್ಕೆ ದಾಳಿ ನಡೆಸಿತು. ಪೊಲೀಸರಿಗಿಂತ ಚಾಣಾಕ್ಷರಾದ ನಕ್ಸಲೈಟ್‌ ಪಡೆ, ಪೊಲೀಸರ ವಾಸನೆ ಬಡಿಯುತ್ತಿದ್ದಂತೆ, ದಟ್ಟವಾದ ಕಾಡಿರುವ ಜಾಗದೆಡೆಗೆ ಕಾಲ್ಕಿತ್ತಿದೆ. ಎಂದು ಪೊಲೀಸ್‌ ಸೂಪರಿಂಟೆಂಡೆಂಟ್‌ ಎಸ್‌. ಮುರುಗನ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಕ್ಸಲೈಟ್‌ ಚಟುವಟಿಕೆಗಳಿಗೆ ಮೂಲ ಕಾರಣ ಮತ್ತು ಪರಿಹಾರವನ್ನು ಸದ್ಯದಲ್ಲೇ ಕಂಡುಕೊಳ್ಳಲಿದ್ದೇವೆ ಎಂದು ಮುರುಗನ್‌ ಸುದ್ದಿಗಾರರಿಗೆ ತಿಳಿಸಿದರು.

ಹತ್ತು ದಿನಗಳ ಹಿಂದೆಯಷ್ಟೇ ನಕ್ಸಲೈಟ್‌(ಸಿಪಿಐ-ಎಮ್‌ಎಲ್‌) ರಾಜ್ಯ ಕಾರ್ಯದರ್ಶಿ ಪ್ರೇಮ್‌, ಕುದುರೆ ಮುಖ ಅರಣ್ಯದ ಗುಪ್ತ ತಾಣವೊಂದರಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+