ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು : ತಮಿಳ್ನಾಡಿಗೆ ಬಂಪರ್ ಲಾಟರಿ
ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು : ತಮಿಳ್ನಾಡಿಗೆ ಬಂಪರ್ ಲಾಟರಿ
ಕಬಿನಿ ಜಲಾಶಯದಿಂದ ಮತ್ತೆ ನೀರು ಬಿಡುಗಡೆ
ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ಕಡಿಮೆಯಾದುದರಿಂದ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು . ಆದರೆ, ಪ್ರಸ್ತುತ ಕೇರಳದ ವೈನಾಡು ಪ್ರದೇಶದಲ್ಲಿ ಉತ್ತಮ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕಬಿನಿಗೆ ಒಳ ಹರಿವು ಹೆಚ್ಚಿದೆ. ಕಬಿನಿಯಲ್ಲಿನ ನೀರಿನ ಸಂಗ್ರಹ 2281.99 ಅಡಿಗೆ ಮುಟ್ಟಿದೆ. ಒಳಹರಿವಿನ ಪ್ರಮಾಣ 12,649 ಕ್ಯುಸೆಕ್ಸ್‌ಗಳಷ್ಟಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ ತಿಂಗಳ ದ್ವಿತೀಯಾರ್ಧದಲ್ಲಿ ಸುಮಾರು 14 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ಕಾವೇರಿ ನ್ಯಾಯಾಧಿಕರಣ ಮಧ್ಯಂತರ ತೀರ್ಪಿನ ಪ್ರಕಾರ ಕರ್ನಾಟಕ ಈವರೆಗೆ 10.4 ಟಿಎಂಸಿಯಷ್ಟು ನೀರನ್ನು ಮಾತ್ರ ತಮಿಳುನಾಡಿಗೆ ಬಿಡಬೇಕಿತ್ತು .
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ












Click it and Unblock the Notifications