ದೇವೇಗೌಡರು ನಮ್ಮ ಸರಕಾರದ ನೇತೃತ್ವ ವಹಿಸಿದ್ದಾರೆ: ಧರ್ಮ ಸಿಂಗ್
ದೇವೇಗೌಡರು ನಮ್ಮ ಸರಕಾರದ ನೇತೃತ್ವ ವಹಿಸಿದ್ದಾರೆ: ಧರ್ಮ ಸಿಂಗ್
ಪರಸ್ಪರ ಪ್ರಶಂಸೆಯ ಸುರಿಮಳೆಗೈದುಕೊಂಡ ದೇವೇಗೌಡ ಮತ್ತು ಧರ್ಮಸಿಂಗ್
ಈ ಮಾತುಗಳನ್ನು ನುಡಿದವರು ಜಾತ್ಯಾತೀತ ಜನತಾದಳದ ಯಾವ ಕಾರ್ಯಕರ್ತರೂ ಅಲ್ಲ. ರಾಜ್ಯ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿರುವ ಹಿರಿಯ ಕಾಂಗ್ರೆಸಿಗ, ಮುಖ್ಯಮಂತ್ರಿ ಧರ್ಮಸಿಂಗ್. ಅವರು ಜೆಎಸ್‌ಎಸ್ ವಿದ್ಯಾಪೀಠ ಜುಲೈ1ರ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಬಳಿಕ ಮಾತನಾಡಿದ ದೇವೇಗೌಡ ಧರ್ಮಸಿಂಗ್ ಗುಣಗಾನ ಮಾಡಿ, ಅಕಸ್ಮಾತ್ ಸರಕಾರ ರೈತರ ವಿರುದ್ಧವಾಗಿ ಹೋದರೆ ತಾನು ಮತ್ತೆ ಸಿಡಿದೇಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುತ್ತೂರು ಮಠದ ದೇಶಿಕೇಂದ್ರ ಸ್ವಾಮಿ, ಹೈಕೋರ್ಟ್ ನ್ಯಾಯಾಧೀಶ ಎಸ್.ಆರ್.ಬನ್ನೂರು ಮಠ , ಡಾ।ಡಿ.ಎಂ.ನಂಜುಂಡಪ್ಪ ಮುಂತಾದವರು ವೇದಿಕೆಯಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications