ಹೈಕೋರ್ಟ್ ಪೀಠ : ಸರ್ವಪಕ್ಷ ನಿಯೋಗಕ್ಕೆ ಧರ್ಮ ಸಿಂಗ್ ಸಾರಥ್ಯ
ಹೈಕೋರ್ಟ್ ಪೀಠ : ಸರ್ವಪಕ್ಷ ನಿಯೋಗಕ್ಕೆ ಧರ್ಮ ಸಿಂಗ್ ಸಾರಥ್ಯ
ಪ್ರತಿಭಟನೆ ಕೈಬಿಡಲು ಧಾರವಾಡ ವಕೀಲರಿಗೆ ಮನವಿ
ಜುಲೈ 6 ಅಥವಾ 7 ರಂದು ಸರ್ವ ಪಕ್ಷಗಳ ನಿಯೋಗದೊಂದಿಗೆ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ಕೆ.ಜೈನ್ ಅವರನ್ನು ಭೇಟಿ ಮಾಡಲಾಗುವುದು. ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ರಚನೆ ಸಂಬಂಧ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸುವುದು ಈ ಸರ್ವಪಕ್ಷಗಳ ನಿಯೋಗದ ಉದ್ದೇಶ ಎಂದು ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಗುರುವಾರ (ಜು.1) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ಧಾರವಾಡ ವಕೀಲರ ಸಂಘ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಕೈ ಬಿಡುವಂತೆ ಬಾರ್ ಕೌನ್ಸಿಲ್ ಸದಸ್ಯರಿಗೆ ಧರ್ಮಸಿಂಗ್ ಮನವಿ ಮಾಡಿಕೊಂಡರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications