ಮಳೆ ಮಳೆ: ರಾಯಚೂರು ಜಿಲ್ಲೆಯಲ್ಲೂ ಮಾಯದಂಥ ಮಳೆ ಬಂತಣ್ಣ
ಮಳೆ ಮಳೆ: ರಾಯಚೂರು ಜಿಲ್ಲೆಯಲ್ಲೂ ಮಾಯದಂಥ ಮಳೆ ಬಂತಣ್ಣ
ರಾಯಚೂರು, ಮಾನ್ವಿ, ದೇವದುರ್ಗ, ಸಿಂಧನೂರು ತಾಲ್ಲೂಕುಗಳಲ್ಲಿ ಮಳೆ ಬಂತು ಮಳೆ
ಕಳೆದ ಭಾನುವಾರ ಹಾಗೂ ಸೋಮವಾರ (ಜೂ. 26, 27) ರಾಯಚೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಬಿಟ್ಟೂಬಿಡದೆ ಸುರಿದಿದ್ದು , ಮಳೆಯ ಮುಸುಕು ಜಿಲ್ಲೆಯಲ್ಲಿನ್ನೂ ಮುಂದುವರೆದಿದೆ. ರಾಯಚೂರು ನಗರಿಗೂ ಮಳೆ ಕೃಪೆದೋರಿದೆ.
ರಾಯಚೂರು ಹಾಗೂ ಪಟ್ಟಣದ ಆಸುಪಾಸು ಮಾತ್ರವಲ್ಲದೆ ಮಾನ್ವಿ ತಾಲ್ಲೂಕಿನಲ್ಲೂ ಉತ್ತಮ ಮಳೆ ಬಿದ್ದಿದೆ. ದೇವದುರ್ಗ ಹಾಗೂ ಸಿಂಧನೂರು ತಾಲ್ಲೂಕುಗಳ ಮಳೆಯ ಜಾತಕವೂ ಚೆನ್ನಾಗಿದೆಯೆಂದು ವರದಿಗಳು ತಿಳಿಸಿವೆ.
ಜೂನ್ ಆರಂಭದಲ್ಲಿ ಕೊಂಚ ಮಳೆ ಸುರಿಯಿತಾದರೂ ಆನಂತರ ಜಿಲ್ಲೆಯಲ್ಲಿ ಮಳೆಯ ಸುದ್ದಿಯೇ ಇರಲಿಲ್ಲ . ಉತ್ತುಬಿತ್ತಲು ಸಿದ್ಧತೆ ನಡೆಸಿದ್ದ ರೈತರಲ್ಲಿ ಮಳೆಯ ಕಣ್ಣಾಮುಚ್ಚಾಲೆ ಆತಂಕ ಮೂಡಿಸಿತ್ತು . ಪ್ರಸ್ತುತ ಬಿದ್ದಿರುವ ಮಳೆ ರೈತರ ಕನಸುಗಳಿಗೆ ಮತ್ತೆ ಬಣ್ಣ ತುಂಬಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications