ವೀರಪ್ಪನ್ ಶರಣಾಗತಿಗೆ ಮದನಿ ಸಹಾಯ ಯಾಚಿಸಿದ ಎಸ್‌ಟಿಎಫ್?
ವೀರಪ್ಪನ್ ಶರಣಾಗತಿಗೆ ಮದನಿ ಸಹಾಯ ಯಾಚಿಸಿದ ಎಸ್‌ಟಿಎಫ್?
1998ರ ಕೊಯಮುತ್ತೂರು ಸರಣಿ ಬಾಂಬ್ ಸ್ಫೋಟದ ಆರೋಪದ ಮೇಲೆ ಜೈಲಿನಲ್ಲಿರುವ ಮದನಿ
ಈ ಕುರಿತು ಕೊಯಮುತ್ತೂರು ಜೈಲಿನಲ್ಲಿರುವ ಆತನನ್ನು ಪೊಲೀಸರು ರಹಸ್ಯವಾಗಿ ಸಂಪರ್ಕಿಸಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. 1998ರ ಕೊಯಮುತ್ತೂರು ಸರಣಿ ಬಾಂಬ್ ಸ್ಫೋಟ ಮತ್ತು ದಾವುದ್ ಇಬ್ರಾಹಿಂ ಜೊತೆ ನಿಕಟ ಸಂಪರ್ಕ ಆರೋಪದ ಮೇಲೆ ಪೊಲೀಸರು ಈತನನ್ನು ಬಂಧಿಸಿ ಜೈಲಿನಲ್ಲಿ ಇರಿಸಿದ್ದಾರೆ.
ಶರಣಾಗತಿಯ ಲಾಭವನ್ನು ಜೈಲಿನಲ್ಲಿರುವ ವಿರಪ್ಪನ್ ಸಹಚರರಿಗೆ ಮದಾನಿ ಮೂಲಕ ತಿಳಿಯ ಪಡಿಸುವುದು. ಬಳಿಕ ಅವರು ವೀರಪ್ಪನ್‌ಗೆ ಈ ಸಂದೇಶ ರವಾನಿಸಿ ಆತನ ಮನವೊಲಿಸುವ ಯತ್ನ ಮಾಡುವುದು ಸದ್ಯದ ಕಾರ್ಯ ಯೋಜನೆಯಾಗಿದೆ.
ಆದರೆ ಐಎಸ್‌ಐ ಸಂಪರ್ಕ ಹೊಂದಿದ ಮದನಿ ಮಧ್ಯಸ್ಥಿಕೆ ವಹಿಸುವ ಬಗ್ಗೆ ಎಸ್‌ಟಿಎಫ್ ಒಳಗಡೆಯೇ ಅಸಮಾಧಾನವಿದೆ. ಹಾಗೂ ಈ ಕಾರ್ಯ ಯೋಜನೆಯನ್ನು ಪೊಲೀಸರು ನಿರಾಕರಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್












Click it and Unblock the Notifications