ಧರ್ಮಸಿಂಗ್‌ರ ‘ಕುದುರೆ ವ್ಯಾಪಾರ’ ಯಶಸ್ವಿ : ಯಡಿಯೂರಪ್ಪ ದಾಳಿ
ಧರ್ಮಸಿಂಗ್‌ರ ‘ಕುದುರೆ ವ್ಯಾಪಾರ’ ಯಶಸ್ವಿ : ಯಡಿಯೂರಪ್ಪ ದಾಳಿ
ಗೆಲುವಿನ ಕುರಿತು ಧರ್ಮಸಿಂಗ್, ಪೂಜಾರಿ ಸಂತಸ
ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಕುದುರೆ ವ್ಯಾಪಾರದಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ನಿವಾಸದಲ್ಲಿ ಪಕ್ಷೇತರ ಶಾಸಕರ ಸಭೆ ಕರೆದಿದ್ದ ಮುಖ್ಯಮಂತ್ರಿ ಧರ್ಮಸಿಂಗ್- ಶಾಸಕರಿಗೆ ಭಾರೀ ಆಶ್ವಾಸನೆಗಳನ್ನು ನೀಡಿದ್ದಾರೆ. ಪಕ್ಷೇತರ ಶಾಸಕರಿಗೆ ಸರ್ಕಾರ ತೋರಿದ ಆಮಿಷವೂ ಆಕರ್ಷಕವಾಗಿತ್ತು ಎಂದು ಬಿಜೆಪಿ ಮುಖಂಡ ಹಾಗೂ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ನಾಯಕ ಯಡಿಯೂರಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ಜನಬೆಂಬಲ ಪಡೆದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ ಪಕ್ಷೇತರ ಶಾಸಕರ ನಡವಳಿಕೆಯನ್ನು ಆಕ್ಷೇಪಿಸಿದ ಯಡಿಯೂರಪ್ಪ , ಇದು ಜನಾದೇಶಕ್ಕೆ ವಿರುದ್ಧ ಎಂದು ಬಣ್ಣಿಸಿದರು.
ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷ ಬಿ.ಸೋಮಶೇಖರ್ ಕೂಡ ಸಮ್ಮಿಶ್ರ ಸರ್ಕಾರದ ಚುನಾವಣಾ ತಂತ್ರವನ್ನು ಟೀಕಿಸಿದ್ದಾರೆ. ಹಣ ಹಾಗೂ ತೋಳ್ಬಲ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಧರ್ಮಸಿಂಗ್ ಸಂತಸ : ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನ ಕುರಿತು ಮುಖ್ಯಮಂತ್ರಿ ಧರ್ಮಸಿಂಗ್ ಹಾಗೂ ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಸಂತಸ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತಗಳ ವಿವರ :
ಬಿ.ಕೆ. ಹರಿಪ್ರಸಾದ್ (ಕಾಂಗ್ರೆಸ್) - 48
ವೆಂಕಯ್ಯ ನಾಯ್ಡು (ಬಿಜೆಪಿ )- 47
ಆಸ್ಕರ್ ಫರ್ನಾಂಡಿಸ್ (ಕಾಂಗ್ರೆಸ್)- 46
ಎಂಎಎಂ ರಾಮಸ್ವಾಮಿ (ಜಿಡಿಎಸ್)- 46
ಶಕುಂತಲಾ ಹೆಗಡೆ (ಬಿಜೆಪಿ)- 37
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications