ವಸುಧೇಂದ್ರ, ವಸುಮತಿ ಉಡುಪರ ಕಥೆ-ಕವಿತೆಗೆ ಕಥಾರಂಗ ಪ್ರಶಸ್ತಿ
ವಸುಧೇಂದ್ರ, ವಸುಮತಿ ಉಡುಪರ ಕಥೆ-ಕವಿತೆಗೆ ಕಥಾರಂಗ ಪ್ರಶಸ್ತಿ
ಜುಲೈ 18ರಂದು ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು : ಭರವಸೆಯ ಕಥನ ಕೃಷಿಕ ವಸುಧೇಂದ್ರರ ‘ಅಪಸ್ವರದಲ್ಲೊಂದು ಆರ್ತನಾದ’ ಕಥೆ ಕಥಾರಂಗಂ ಪ್ರಶಸ್ತಿಗೆ ಆಯ್ಕೆಯಾಗಿದೆ.
ಬೆಂಗಳೂರಿನ ಕಥಾರಂಗಂ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘಟನೆ ವರ್ಷದ ಅತ್ಯುತ್ತಮ ಕಥೆ ಹಾಗೂ ಕವಿತೆಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡುತ್ತಿದೆ. 2004ರ ಪ್ರಶಸ್ತಿಗಳು ಈಗ ಪ್ರಕಟವಾಗಿದ್ದು , 2003ನೇ ಸಾಲಿನಲ್ಲಿ ಬೆಳಕು ಕಂಡ ವಸುಧೇಂದ್ರರ ‘ಅಪಸ್ವರದಲ್ಲೊಂದು ಆರ್ತನಾದ’ ಹಾಗೂ ವಸುಮತಿ ಉಡುಪರ ‘ಬಾಲೆಯಾಡಿಸುವ ಬಾಲೆ’ ಕವಿತೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಲಸೂರಿನ ಡಿ.ಎ.ಡಿ. ಸಭಾಂಗಣದಲ್ಲಿ ಜುಲೈ 18ರಂದು ಪ್ರಶಸ್ತಿ ಪ್ರದಾನ ಸಮಾರಂಭ ಜರುಗುವುದು ಎಂದು ಕಥಾರಂಗ ಪ್ರಕಟಣೆ ತಿಳಿಸಿದೆ.
ವಸುಧೇಂದ್ರರ ‘ಅಪಸ್ವರದಲ್ಲೊಂದು ಆರ್ತನಾದ’ ಕಥೆ 2003ರ ನವಂಬರ್ 28ರಂದು ದಟ್ಸ್‌ಕನ್ನಡದಲ್ಲಿ ಪ್ರಕಟವಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications