ದೇಶಾದ್ಯಂತ ಸಿಬಿಐ ದಾಳಿ ; ಬೆಂಗಳೂರಿನಲ್ಲಿ ‘ಆರೋಗ್ಯ’ ಪರಿಶೀಲನೆ
ದೇಶಾದ್ಯಂತ ಸಿಬಿಐ ದಾಳಿ ; ಬೆಂಗಳೂರಿನಲ್ಲಿ ‘ಆರೋಗ್ಯ’ ಪರಿಶೀಲನೆ
ದೇಶದ ವಿವಿಧ ಭಾಗಗಳಲ್ಲಿ ದಾಳಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ಪ್ರಕರಣ ದಾಖಲು
ಬೆಂಗಳೂರಿನಲ್ಲಿ ಐದು ಆರೋಗ್ಯ ಸಂಸ್ಥೆಗಳ ಮೇಲೆ ಸಿಬಿಐ ಅಧಿಕಾರಿಗಳು ಜೂನ್ 25ರ ಶುಕ್ರವಾರ ದಾಳಿ ನಡೆಸಿದರು. ಈ ದಾಳಿಯಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಹಾಗೂ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಸಿಬಿಐ ಎಸ್‌ಪಿ ಬಿಜು ಜೋಸೆಫ್ ನೇತೃತ್ವದ ತಂಡ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ (ಬಳ್ಳಾರಿ ರಸ್ತೆ ), ರಾಷ್ಟ್ರೀಯ ಕ್ಷಯ ರೋಗಗಳ ಸಂಸ್ಥೆ (ಬಳ್ಳಾರಿ ರಸ್ತೆ) , ಕೇಂದ್ರ ಸರ್ಕಾರದ ಆರೋಗ್ಯ ವಿಜ್ಞಾನ ಸಂಸ್ಥೆಯ ಹೆಚ್ಚುವರಿ ಮಹಾ ನಿರ್ದೇಶಕರ ಕಚೇರಿ (ಕೋರಮಂಗಲ), ವೆಲ್‌ಫೇರ್ ಕಮೀಷನರ್ ಕಚೇರಿ (ಮಿಲ್ಲರ್ ರಸ್ತೆ ) ಹಾಗೂ ಎಚ್‌ಎಎಲ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿತು.
ಕೆಲವು ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಗಿದ್ದು , ದಾಖಲೆಗಳ ಪರಿಶೀಲನೆ ನಡೆಯುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ದೆಹಲಿ ವರದಿ : ಬ್ಯಾಂಕ್, ಆದಾಯ ತೆರಿಗೆ, ಯುಟಿಐ, ವಿಮೆ, ಅಬಕಾರಿ ಸೇರಿದಂತೆ ವಿವಿಧ ಇಲಾಖೆಯ 74 ಅಧಿಕಾರಿಗಳ ಕಚೇರಿ ಮತ್ತು ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದ್ದು , 389 ಪ್ರಕರಣ ದಾಖಲಿಸಿಕೊಂಡಿದೆ ಎಂದು ಸಿಬಿಐ ನಿರ್ದೇಶಕ ಯು.ಎಸ್.ಮಿಶ್ರಾ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications