ಸಾಲದ ಹೊರೆ ಇಳಿಮುಖ ಮಾಡಲು ಸರಕಾರ ಚಿಂತನೆ: ಸಿದ್ಧರಾಮಯ್ಯ
ಸಾಲದ ಹೊರೆ ಇಳಿಮುಖ ಮಾಡಲು ಸರಕಾರ ಚಿಂತನೆ: ಸಿದ್ಧರಾಮಯ್ಯ
ರಾಜ್ಯದ ಆದಾಯದಲ್ಲಿ ಶೇಕಡಾ 41 ಭಾಗ ಬಡ್ಡಿ ತೆರಲು ವ್ಯಯವಾಗುತ್ತಿದೆ
ಈಗಿರುವ ಸಾಲ ಸ್ವೀಕಾರ ಕ್ರಮ ರಾಜ್ಯದ ಹಿತದೃಷ್ಟಿಯಿಂದ ಉತ್ತಮವಲ್ಲ. ರಾಜ್ಯ ಬಜೆಟ್‌ನಲ್ಲಿ ಈಗಾಗಲೇ 41 ಶೇಕಡಾ ಹಣ ಬಡ್ಡಿಗಾಗಿ ವ್ಯಯವಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖಾ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಹೇಳಿದರು. ಅವರು ವಿತ್ತ ಸಚಿವರೂ ಆಗಿದ್ದಾರೆ.
ಯೋಜನೆಗಳ ಹೆಸರಲ್ಲಿ ಸಾಲ ತಂದು ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂದೆ ಸಾಲ ಸ್ವೀಕರಿಸುವಾಗ ಅದರಿಂದಾಗುವ ಆದಾಯದ ಕುರಿತೂ ಆಲೋಚಿಸಬೇಕು. ಹಳೆ ಬಿಲ್ಲುಗಳನ್ನು ಕಡತದಲ್ಲೇ ಬಾಕಿ ಉಳಿಸಿ ರಾಜಕೀಯ ವ್ಯಕ್ತಿಗಳಿಂದ ಒತ್ತಡ ತರಿಸಿ ಕೊಳ್ಳಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಾಜ್ಯ ಸರಕಾರವು ಉತ್ತರ ಮತ್ತು ದಕ್ಷಿಣ ಭಾಗದ ರಸ್ತೆಗಳಿಗೆ ಒಂದೇ ರೀತಿಯಲ್ಲಿ ಹಣ ವ್ಯಯ ಮಾಡಿದ್ದರೂ ಅಭಿವೃದ್ಧಿಯಲ್ಲಿ ಯಾಕೆ ಇಷ್ಟೊಂದು ವ್ಯತ್ಯಯವಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications