ಜೋಗದ ಗುಂಡಿಯಲ್ಲಿ ‘ಕಾಮನಬಿಲ್ಲು’ ಮೂಡಿದೆ, ನೀವು ಕಂಡಿರಾ?
ಜೋಗದ ಗುಂಡಿಯಲ್ಲಿ ‘ಕಾಮನಬಿಲ್ಲು’ ಮೂಡಿದೆ, ನೀವು ಕಂಡಿರಾ?
ಎಲ್ಲ ದಾರಿಗಳು ಜೋಗದ ಸಿರಿಯ ಕಡೆಗೆ....
ರಾಜ್ಯದ ಪ್ರವಾಸಿಗರು ಹಾಗೂ ದೇಶದ ವಿವಿಧ ಭಾಗಗಳಿಂದ ರಾಜ್ಯಕ್ಕೆ ಆಗಮಿಸುವ ಸಾವಿರಾರು ಪ್ರವಾಸಿಗರಿಗೀಗ ಜಾಗತಿಕ ಖ್ಯಾತಿಯ ಜೋಗ ಜಲಪಾತವೇ ಆಕರ್ಷಣೆಯ ಕೇಂದ್ರ. ರಭಸದಿಂದ ಧುಮ್ಮಿಕ್ಕುವ ಜೋಗದ ಗುಂಡಿಯ ಕವಲುಧಾರೆಗಳು ಕಣ್ತುಂಬಿದಾಗ- ಮೂಗೂರು ಮಲ್ಲಪ್ಪ ಹಾಡಿದಂತೆ ಜನುಮ ಧನ್ಯವಾದ ಅನುಭವ.
ಬಸ್ಸುಗಳು, ಕಾರುಗಳು ಮಾತ್ರವಲ್ಲದೆ ದ್ವಿಚಕ್ರ ವಾಹನಗಳಲ್ಲೂ ಪ್ರವಾಸಿಗರು ಜೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರವಾಸಿ ಸೌಲಭ್ಯಗಳ ಕೊರತೆಯಿದ್ದರೂ, ಜೋಗದ ಸಿರಿ ಬೆಳಕು ಎಲ್ಲ ಕುಂದುಗಳನ್ನೂ ಮುಚ್ಚಿ ಹಾಕುವಷ್ಟು ಪ್ರಬಲವಾಗಿದೆ. ಕಳೆದೆರಡು ಭಾನುವಾರಗಳಲ್ಲಂತೂ ಜೋಗದಲ್ಲಿ ಜಾತ್ರೆಯ ವಾತಾವರಣ, ಸಂಭ್ರಮ.
ಕಳೆದ ಮೂರು ವರ್ಷಗಳ ಬರಗಾಲದಿಂದಾಗಿ ಬತ್ತಿದ ಜೋಗ ತನ್ನ ಖ್ಯಾತಿಯನ್ನು ಕಳಕೊಂಡಿತ್ತು . ಆದರೆ ಈ ಬಾರಿ ಸುರಿದ ಉತ್ತಮ ಮಳೆಯಿಂದಾಗಿ ಜಲಪಾತದಲ್ಲಿ ಗಂಗಾವತರಣ ಉಂಟಾಗಿದ್ದು ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ.
ನೀರಿನ ಬಾಗು ಬಳುಕು ಉಕ್ಕು ಹಾಗೂ ಸೂರ್ಯ ರಶ್ಮಿಯ ಚೆನ್ನಾಟದಿಂದಾಗಿ ಕೆಲವೊಮ್ಮೆ ಜಲಪಾತದ ಪರಿಸರದಲ್ಲಿ ಕಾಮನಬಿಲ್ಲು ಮೂಡುವುದೂ ಉಂಟು. ಆಗ ನೋಡಬೇಕು ಜಲಪಾತದ ಚೆಂದವನ್ನು !
ಅಂದಹಾಗೆ, ನೀವಿನ್ನೂ ಜೋಗದ ಕಡೆ ಹೊಂಟಿಲ್ಲವಾ ? ಬೇಗ ಹೊರಡಿ ; ಜೋಗವ ನೋಡದ ಮೇಲೆ ಅದ್ಯಾತರ ಜನುಮ ? ಕವಿವಾಣಿ ನೆನಪಿದೆ ತಾನೆ ?
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications