ಮಣಿಪಾಲದಲ್ಲಿ ಹದ್ದುಬಸ್ತಿಗೆ ಬರದ ಕಾಲರಾ; ಸೋಂಕಿಗೆ ವೃದ್ಧ ನ ಬಲಿ
ಮಣಿಪಾಲದಲ್ಲಿ ಹದ್ದುಬಸ್ತಿಗೆ ಬರದ ಕಾಲರಾ; ಸೋಂಕಿಗೆ ವೃದ್ಧ ನ ಬಲಿ
ಮಣಿಪಾಲವನ್ನು ಕಾಲರಾ ಪೀಡಿತ ಪ್ರದೇಶ ಎಂದು ಘೋಷಿಸಲು ಪತ್ರ
ಮಣಿಪಾಲದ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಶಂಭು ಭಟ್ (71) ಎನ್ನುವ ವ್ಯಕ್ತಿ ಕಾಲರಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕೆಎಂಸಿ ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಹಾಗೂ ವಿದ್ಯಾರ್ಥಿಗಳು ಕಾಲರಾ ರೋಗಿಗಳ ಉಪಚಾರಕ್ಕೆ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ಆದರೆ ರೋಗದ ಸೋಂಕು ವ್ಯಾಪಕವಾಗುತ್ತಿದೆ. ಆದುದರಿಂದ ಮಣಿಪಾಲವನ್ನು ಕಾಲರಾ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ನಿರ್ದೇಶಕರಿಗೆ ಪತ್ರ ಬರೆದಿರುವುದಾಗಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಫ್.ಎ.ಖಾಜಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications