ಮಣಿಪಾಲದಲ್ಲಿ ಕರುಳು ಬೇನೆಗೆ ಬೀಜ ಬಿತ್ತಿದ ಕಸ- ಚರಂಡಿ ಸಮುದ್ರ
ಮಣಿಪಾಲದಲ್ಲಿ ಕರುಳು ಬೇನೆಗೆ ಬೀಜ ಬಿತ್ತಿದ ಕಸ- ಚರಂಡಿ ಸಮುದ್ರ
ಕಾಲರಾ ಪೀಡಿತರಲ್ಲಿ ಕೆಎಂಸಿ ಆಸ್ಪತ್ರೆ ಸಿಬ್ಬಂದಿ-ವಿದ್ಯಾರ್ಥಿಗಳೂ ಇದ್ದಾರೆ !
ಮಣಿಪಾಲದ ಆಸುಪಾಸಲ್ಲಿ ಕಾಲರಾ ವ್ಯಾಪಕವಾಗುತ್ತಿರುವ ವಿಷಯವನ್ನು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ಕಸದ ಸಂಗ್ರಹವೇ ಕಾಲರಾ ವ್ಯಾಪಕರವಾಗಲು ಕಾರಣವಾಗಿದೆ.
ಮಣಿಪಾಲದಲ್ಲಿ ಹೊಟೇಲುಗಳ ತ್ಯಾಜ್ಯಗಳ ವಿಲೇವಾರಿ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ . ಇಷ್ಟೇ ಸಾಲದೆನ್ನುವಂತೆ ಕೆಎಂಸಿ ಆಸ್ಪತ್ರೆ ಕ್ಯಾಂಟೀನು ಕೂಡ ಕಸದ ಸಮುದ್ರಕ್ಕೆ ತನ್ನ ಪಾಲು ಸಲ್ಲಿಸುತ್ತಿದೆ. ಕಾಲರಾ ಪೀಡಿತರಲ್ಲಿ ಕೆಎಂಸಿ ಆಸ್ಪತ್ರೆ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿರುವುದು ವಿಶೇಷ.
ಕಾಲರಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ಆರೋಗ್ಯ ಇಲಾಖೆ ತೊಡಗಿದ್ದು , ಬಿಸಿ ಆಹಾರ ಹಾಗೂ ನೀರನ್ನು ಮಾತ್ರ ಸೇವಿಸುವಂತೆ ನಾಗರಿಕರಿಗೆ ಸಲಹೆ ಮಾಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications