ರಾಜ್ಯವು ಶೀಘ್ರವೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲಿ : ಗೌಡ
ರಾಜ್ಯವು ಶೀಘ್ರವೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲಿ : ಗೌಡ
ಪಕ್ಷ ಸಂಘಟನೆ ಬಲಪಡಿಸಲು ದೇವೇಗೌಡ ರಾಜ್ಯಾದ್ಯಂತ ಪ್ರವಾಸ
ಪತ್ರಿಕಾ ಸಂದರ್ಶನದಲ್ಲಿ ದೇವೇಗೌಡ ಹೇಳಿದ್ದು
ಅಕ್ಕಿ ಹಗರಣ
- ಅಕ್ಕಿ ಹಗರಣ ತನಿಖೆಗೆ ಜಂಟಿ ಸದನ ಸಮಿತಿ ರಚಿಸಲು ಸರಕಾರ ನಿರಾಕರಿಸಿರುವುದರಲ್ಲಿ ತಪ್ಪೇನಿಲ್ಲ.
- ಇದರಲ್ಲಿ ಜೆಡಿಎಸ್ ಪಾತ್ರ ಏನೇನೂ ಇಲ್ಲ. ಹಗರಣ ನಡೆದಾಗ ಜೆಡಿಎಸ್ ಆಡಳಿತ ಪಕ್ಷವಾಗಿರಲಿಲ್ಲ.
- ಬಿಜೆಪಿ ಪ್ರಮುಖ ವಿರೋಧಿ ಪಕ್ಷವಾಗಿತ್ತು. ವಿರೋಧಿ ಪಕ್ಷದ ಕಾರ್ಯವೂ ಮುಖ್ಯವಾಗುತ್ತದೆ. ಅವರಿಗೆ ಹಗರಣದ ತನಿಖೆ ನಡೆಸಲೇ ಬೇಕೆಂದಿದ್ದರೆ ಸಿಬಿಐಗೆ ನೀಡಲು ಪಟ್ಟು ಹಿಡಿಯಲಿ.
- ಗುಜರಾತ್ ಕುರಿತು ವಾಜಪೇಯಿಯೇ ಹೇಳಿಕೆ ನೀಡಿದ್ದಾರೆ. ಅಂದ ಮೇಲೆ ಕೋಮುವಾದಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಹೇಗೆ?
- ರಾಜ್ಯದಲ್ಲಿ ನಿರ್ಮಾಣವಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಕೋಮುವಾದಿಗಳನ್ನು ಅಧಿಕಾರದಿಂದ ಹೊರಗಿಡಲು ಈ ಸಮ್ಮಿಶ್ರ ಸರಕಾರ ರಚನೆ
- ಎರಡೂ ಪಕ್ಷಗಳು ಕುಳಿತು ಶೀಘ್ರವೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸ ಬೇಕು.
- ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ.
- ಪಕ್ಷ ಸಂಘಟನೆ ಬಲಪಡಿಸಲು ರಾಜ್ಯಾದ್ಯಂತ ಪ್ರವಾಸ. ಇದರಿಂದ ಸಮ್ಮಿಶ್ರದ ಸರಕಾರದ ಮೇಲೆ ಯಾವುದೇ ಪರಿಣಾಮವಿಲ್ಲ
- ಕಾವೇರಿ ನೀರು ಬಿಟ್ಟಿರುವುದು ಬಾಂಧವ್ಯದ ಪ್ರತೀಕ.
- ಕೇಂದ್ರಕ್ಕೆ ನೀಡಿದ ತನ್ನ ಬೆಂಬಲವನ್ನು ಬಳಸಿಕೊಂಡು ಡಿಎಮ್‌ಕೆ ಸರಕಾರದ ಮೇಲೆ ಒತ್ತಡ ತರಬಾರದು
- ಪಕ್ಷವು ಕೇಂದ್ರದಲ್ಲಿ ರಾಜ್ಯದ ಹಿತಕಾಯಲು ಬದ್ಧ . ಸಂಸತ್ತಿನಲ್ಲಿ ಜೆಡಿಎಸ್ ಸಂಸದರ ಸಂಖ್ಯೆ ನಗಣ್ಯವಾದರೂ ರಾಜಕೀಯ ಪ್ರಭಾವ ಪ್ರಬಲವಾಗಿದೆ.
- ಎಮ್‌ಎಎಮ್ ರಾಮಸ್ವಾಮಿಯವರಿಗೆ 1996ರಲ್ಲಿ ನೀಡಿದ ವಚನದನ್ವಯ ಅವರಿಗೆ ರಾಜ್ಯಸಭೆಗೆ ಟಿಕೆಟ್ ನೀಡಲಾಗಿದೆ.
- ಜೆಡಿಎಸ್‌ನ ಹೆಚ್ಚುವರಿ ಮತಗಳು ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಗೆ
ಮುಖಪುಟ / ವಾರ್ತೆಗಳು












Click it and Unblock the Notifications