ತಮಿಳುನಾಡಿಗೆ ನೀರು ಬಿಟ್ಟದ್ದು ಮಹಾ ಅಪರಾಧ: ಯಡಿಯೂರಪ್ಪ
ತಮಿಳುನಾಡಿಗೆ ನೀರು ಬಿಟ್ಟದ್ದು ಮಹಾ ಅಪರಾಧ: ಯಡಿಯೂರಪ್ಪ
ತಮಿಳುನಾಡಿಗೆ ಕಾವೇರಿ ನೀರು : ಧರ್ಮಸಿಂಗ್ ಸ್ಪಷ್ಟನೆ
ಈಗಾಗಲೇ 10ಟಿಎಮ್‌ಸಿ ನೀರು ಹರಿದು ಹೋಗಿದೆ. ಅದರ ಮೇಲೆ 12ಕ್ಯೂಸೆಕ್ಸ್ ನೀರು ಬಿಡುತ್ತಿದ್ದಾರೆ. ಇದಕ್ಕೆ ಕೇಂದ್ರದ ರಾಜಕೀಯ ಒತ್ತಡಗಳೇ ಕಾರಣ. ಕೇಂದ್ರದ ಮೇಲೆ ಡಿಎಮ್‌ಕೆ ತಂದ ಒತ್ತಡಕ್ಕೆ ಕಾಂಗ್ರೆಸ್ ಮಣಿದಿದೆ ಎಂದು ಆರೋಪಿಸಿದ್ದಾರೆ.
ಈ ನಡುವೆ ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಮುಖ್ಯಮಂತ್ರಿ ಧರ್ಮಸಿಂಗ್ ಸಮರ್ಥಿಸಿಕೊಂಡಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಬಿನಿ ಜಲಾಶಯ ತುಂಬಿದೆ. ನೀರು ಅಪಾಯದ ಮಟ್ಟ ಮೀರಿದೆ. ಇದರಿಂದ ಕೆಳಗಿರುವ ಹಳ್ಳಿಗಳು ಮತ್ತು ನಂಜನಗೂಡು ಮುಳುಗುವ ಅಪಾಯದಲ್ಲಿತ್ತು. ಅದಕ್ಕೆ ಎರಡು ದಿನ 25 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ












Click it and Unblock the Notifications