ಹಂಪಿ ಸ್ಮಾರಕಗಳ ನಿರ್ವಹಣೆ ‘ಓಕೆ’! ಯುನೆಸ್ಕೊ ಅಧಿಕಾರಿಗಳ ನೆಮ್ಮದಿ
ಹಂಪಿ ಸ್ಮಾರಕಗಳ ನಿರ್ವಹಣೆ ‘ಓಕೆ’! ಯುನೆಸ್ಕೊ ಅಧಿಕಾರಿಗಳ ನೆಮ್ಮದಿ
ತಲವಾರ್‌ಘಟ್ಟದಲ್ಲಿನ ಸೇತುವೆ ನಿರ್ಮಾಣ ಕಾಮಗಾರಿ ಸ್ಥಗಿತ
ಹಂಪಿಯಲ್ಲಿನ ಪ್ರಾಚೀನ ಹಾಗೂ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಸ್ಥಳೀಯ ಆಡಳಿತ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಯುನೆಸ್ಕೊ ಅಧಿಕಾರಿಗಳಾದ ಮಿಂಜಾ ಯಂಗ್ ಹಾಗೂ ಫೆಂಗ್ ಜಿಂಗ್ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎನ್.ಜಯರಾಂ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ತಲವಾರ್‌ಘಟ್ಟದಲ್ಲಿನ ಸೇತುವೆ ನಿರ್ಮಾಣ ಕಾಮಗಾರಿಯ ಬಗ್ಗೆ ಯುನೆಸ್ಕೊ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಸ್ತುತ ಸೇತುವೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಬೈಪಾಸ್ ರಸ್ತೆ ಪೂರ್ಣವಾಗುವವರೆಗೂ ಸೇತುವೆ ಕಾಮಗಾರಿಯ ಬಗ್ಗೆ ಯೋಚಿಸುವುದಿಲ್ಲ . ಈ ಕುರಿತು ಯುನೆಸ್ಕೊ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ ಎಂದು ಜಯರಾಂ ಹೇಳಿದರು.
ಹಂಪಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ನಿಧಿ ಸಹಾಯ ಒದಗಿಸಿಕೊಡುವುದಾಗಿಯೂ ಯುನೆಸ್ಕೊ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಜಯರಾಂ ತಿಳಿಸಿದರು. ಇದರೊಂದಿಗೆ, ಇತ್ತೀಚಿನ ದಿನಗಳಲ್ಲಿ ಯುನೆಸ್ಕೊ ಕೆಂಗಣ್ಣಿಗೆ ಗುರಿಯಾಗಿದ್ದ ಹಂಪಿ, ಜಾಗತಿಕ ಪರಂಪರೆ ಪಟ್ಟಿಯಿಂದ ಹೊರಬೀಳುವ ಅಪಾಯದ ಸಾಧ್ಯತೆಗಳು ಕ್ಷೀಣಿಸಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications