ಗೋವಾ:ನೆಲೆ ಕಳಕೊಂಡ ನೂರಾರು ಕನ್ನಡಿಗರು! ರಾಜ್ಯಗಮನಿಸುತ್ತಿದೆ
ಗೋವಾ:ನೆಲೆ ಕಳಕೊಂಡ ನೂರಾರು ಕನ್ನಡಿಗರು! ರಾಜ್ಯಗಮನಿಸುತ್ತಿದೆ
ಕೇಂದ್ರದ ಗಮನ ಸೆಳೆಯಲು ರಾಜ್ಯ ಸರ್ಕಾರದ ನಿರ್ಧಾರ
ಬಯಾನ ಬೀಚ್‌ನಲ್ಲಿನ ಸುಮಾರು 700 ಗುಡಿಸುಗಳಲ್ಲಿ ವಾಸವಾಗಿದ್ದ ಕನ್ನಡಿಗರು ನೆಲೆ ಕಳೆದುಕೊಂಡಿದ್ದಾರೆ. ಈ ಕುರಿತು ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರೊಂದಿಗೆ ಈಗಾಗಲೇ ಚರ್ಚಿಸಿರುವುದಾಗಿ ಜಲ ಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ ಗುರುವಾರ ವಿಧಾನ ಪರಿಷತ್‌ನಲ್ಲಿ ತಿಳಿಸಿದರು. ಸದನದ ಶೂನ್ಯ ಅವಧಿಯಲ್ಲಿ ಜೆಡಿಎಸ್‌ನ ಬಸವರಾಜ ಬೊಮ್ಮಾಯಿ ಪ್ರಶ್ನೆಗೆ ಖರ್ಗೆ ಉತ್ತರಿಸುತ್ತಿದ್ದರು.
ಸುಪ್ರಿಂಕೋರ್ಟ್‌ನ ಆದೇಶದ ಮೇರೆಗೆ ಗೋವೆಯ ಸರ್ಕಾರ ಈ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಬಡ ಕನ್ನಡಿಗರನ್ನು ತೆರವುಗೊಳಿಸಿದ ನಂತರ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಈ ಪ್ರಕರಣವನ್ನು ನ್ಯಾಯಬದ್ಧವಾಗಿ ಇತ್ಯರ್ಥಗೊಳಿಸುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸುತ್ತದೆ ಎಂದು ಖರ್ಗೆ ಹೇಳಿದರು.
ಗೋವಾದಲ್ಲಿನ ಬಯಾನ ಬೀಚ್ ಅಭಿವೃದ್ಧಿಗಾಗಿ, ಬೀಚ್ ಪ್ರದೇಶದಲ್ಲಿನ ಮನೆಗಳನ್ನು ಗೋವಾ ಸರ್ಕಾರ ತೆರವುಗೊಳಿಸುತ್ತಿದೆ. ಇದರಿಂದಾಗಿ ಬೀಚ್ ಪ್ರದೇಶದಲ್ಲಿ ನೆಲೆ ಕಂಡಿದ್ದ ನೂರಾರು ಬಡ ಕನ್ನಡಿಗರು ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
(ಪಿಟಿಐ)
ವಾರ್ತಾ ಸಂಚಯ
ಗೋವಾ ಸರ್ಕಾರದ ಕ್ರಮ : ಸಹಸ್ರಾರು ಕನ್ನಡಿಗರು ಬೀದಿ ಪಾಲು
ಮುಖಪುಟ / ವಾರ್ತೆಗಳು












Click it and Unblock the Notifications