ಬಿಜಾಪುರದ ಸೆಂಟ್ರಲ್ ಜೈಲಿನಲ್ಲಿ ‘ವಿಡಿಯೋ ಕಾನ್ಫರೆನ್ಸ್’ ತಂತ್ರಜ್ಞಾನ
ಬಿಜಾಪುರದ ಸೆಂಟ್ರಲ್ ಜೈಲಿನಲ್ಲಿ ‘ವಿಡಿಯೋ ಕಾನ್ಫರೆನ್ಸ್’ ತಂತ್ರಜ್ಞಾನ
ವಿಡಿಯೋ ಕಾನ್ಫರೆನ್ಸಿಂಗ್ ಸವಲತ್ತಿನಿಂದ ಜೈಲು ಸಿಬ್ಬಂದಿಯ ಒತ್ತಡ ಹಗುರ
ಜಿಲ್ಲಾಧಿಕಾರಿ ಮೊಹಮ್ಮದ್ ಮೊಹಸೀನ್ ಹಾಗೂ ಸೆಷನ್ಸ್ ಜಡ್ಜ್ ಪ್ರಕಾಶ್ ಹುಕ್ಕೇರಿ ಏಕಕಾಲದಲ್ಲಿ ಗುಂಡಿ ಒತ್ತುವ ಮೂಲಕ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯವನ್ನು ಬುಧವಾರ ಅನಾವರಣಗೊಳಿಸಿದರು. ಇದೇ ಸಮಯದಲ್ಲಿ ವೆಬ್ ಕೆಮರಾಗಳ ಬಳಕೆಯ ಕುರಿತು ಅವರು ಮಾತನಾಡಿದರು.
ವಿಡಿಯಾ ಕಾನ್ಫರೆನ್ಸ್‌ನಿಂದಾಗಿ ನ್ಯಾಯಾಲಯಗಳು ಹಾಗೂ ಜೈಲಿನ ನಡುವಿನ ಸಂಪರ್ಕ ಸುಲಭ ಸಾಧ್ಯವಾಗಿದೆ. ಆರೋಪಿ ಜೈಲಿನಲ್ಲಿರುವಂತೆಯೇ ಆತನ ವಿಚಾರಣೆ ನಡೆಸುವುದು ನ್ಯಾಯಾಲಯಕ್ಕೆ ಸಾಧ್ಯವಾಗಿದೆ. ಇದರಿಂದ ಸಮಯ ಹಾಗೂ ಹಣ ಉಳಿತಾಯ ಸಾಧ್ಯವಾಗಿದೆ. ಇಷ್ಟೇ ಅಲ್ಲದೆ, ರಕ್ಷಣಾ ದೃಷ್ಟಿಯಿಂದಲೂ ವಿಡಿಯೋ ಕಾನ್ಫರೆನ್ಸ್ ಉಪಯುಕ್ತ ಎಂದು ಜಿಲ್ಲಾಧಿಕಾರಿ ಮೊಹಸೀನ್ ಬಣ್ಣಿಸಿದರು.
ವಿಡಿಯೋ ಕಾನ್ಫರೆನ್ಸಿಂಗ್ ಸವಲತ್ತು ಜೈಲು ಸಿಬ್ಬಂದಿಯ ಮೇಲಿನ ಒತ್ತಡವನ್ನು ಕಡಿಮೆಗೊಳಿಸಿದೆ ಎಂದು ಜೈಲು ಅಧೀಕ್ಷಕ ರಾಜ್ ಮೊಹಮ್ಮದ್ ಯೂಸಫ್ ಹರ್ಷ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications